ಜೈಲಲ್ಲಿ ದರ್ಶನ್​ಗೆ ಜ್ವರ; ಈಗ ಹೇಗಿದೆ ನಟನ ಆರೋಗ್ಯ?

ಜೈಲಲ್ಲಿ ದರ್ಶನ್​ಗೆ ಜ್ವರ; ಈಗ ಹೇಗಿದೆ ನಟನ ಆರೋಗ್ಯ?

ರಾಜೇಶ್ ದುಗ್ಗುಮನೆ
|

Updated on: Jul 20, 2024 | 8:15 AM

ಜೈಲಲ್ಲಿ ದರ್ಶನ್ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ. ಅವರಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತ್ತು. ಈಗ ಅವರು ಜ್ವರದಿಂದ ಚೇತರಿಕೆ ಕಂಡಿದ್ದಾರೆ. ಮನೆ ಊಟ ಬೇಕು ಎನ್ನುವ ಕೋರಿಕೆಯ ಅರ್ಜಿಯ ವಿಚಾರಣೆ ಮುಂದೂಡಲ್ಪಡುತ್ತಲೇ ಇದೆ. ಇದರಿಂದ ದರ್ಶನ್ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ.

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದೆ. ಜೈಲೂಟ ಚೆನ್ನಾಗಿಲ್ಲ ಎಂದು ದರ್ಶನ್ ಆರೋಪ ಮಾಡುತ್ತಿದ್ದಾರೆ. ಆದರೆ, ಇದನ್ನು ಜೈಲು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಈ ಮಧ್ಯೆ ಜೈಲಲ್ಲಿ ದರ್ಶನ್ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ. ಅವರಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತ್ತು. ಈಗ ಅವರು ಜ್ವರದಿಂದ ಚೇತರಿಕೆ ಕಂಡಿದ್ದಾರೆ. ಮನೆ ಊಟ ಬೇಕು ಎನ್ನುವ ಕೋರಿಕೆಯ ಅರ್ಜಿಯ ವಿಚಾರಣೆ ಮುಂದೂಡಲ್ಪಡುತ್ತಲೇ ಇದೆ. ಇದರಿಂದ ದರ್ಶನ್ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.