Loading video

ಮದುವೆಗೆ ಹೆಣ್ಣು ಸಿಗ್ತಿಲ್ಲವೆಂದು ಕುಡಿದ ಮತ್ತಿನಲ್ಲಿ ಹೈಟೆನ್ಷನ್ ವಿದ್ಯುತ್​ ಕಂಬ ಏರಿದ ಯುವಕ: ಆಮೇಲೇನಾಯ್ತು ನೋಡಿ

| Updated By: Ganapathi Sharma

Updated on: Mar 18, 2025 | 2:57 PM

ಮದ್ಯಪಾನಿಗಳು ಕುಡಿದ ಮತ್ತಿನಲ್ಲಿ ಚರಂಡಿಯಲ್ಲಿ ಬೀಳುವುದು, ರಸ್ತೆಯಲ್ಲಿ ಮಲಗುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕುಡಿದು ಹೈಟೆನ್ಷನ್ ವಿದ್ಯುತ್ ಕಂಬ ಏರಿದ್ದಾನೆ. ಇಳಿಯಲು ಯತ್ನಿಸುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಎಂಬಲ್ಲ ಘಟನೆ ಸಂಭವಿಸಿದೆ.

ಚಾಮರಾಜನಗರ, ಮಾರ್ಚ್ 18: ಕುಡಿದ ಮತ್ತಿನಲ್ಲಿ ಮಸಣಶೆಟ್ಟಿ ಎಂಬ ಯುವಕ ಹೈಟೆನ್ಷನ್ ವಿದ್ಯುತ್​ ಕಂಬ ಏರಿ ಪ್ರಾಣಬಿಟ್ಟ ದಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಬಳಿ ನಡೆದಿದೆ. ವಿದ್ಯುತ್ ಕಂಬದಿಂದ ಇಳಿಯುವಾಗ ವೈರ್ ತಗುಲಿ ಮಸಣಶೆಟ್ಟಿ ಸಾವಿಗೀಡಾಗಿದ್ದಾನೆ. ವಿದ್ಯುತ್ ಕಂಬ ಏರಿದ್ದನ್ನು ನೋಡಿ ಅಲ್ಲಿಗೆ ಧಾವಿಸಿದ್ದ ಸ್ಥಳೀಯರು ಕಂಬದಿಂದ ಕೆಳಗಿಳಿಯುವಂತೆ ಒತ್ತಾಯಿಸಿದ್ದರು. ಆಗ ಆತ ಇಳಿಯಲು ಮುಂದಾಗಿದ್ದಾನೆ. ಇಳಿಯುವ ವೇಳೆ ವಿದ್ಯುತ್ ತಂತಿ ತಗುಲಿ ಮಸಣಶೆಟ್ಟಿ ಸಾವಿಗೀಡಾಗಿದ್ದಾನೆ.

ತಾಯಿ ಕಣ್ಣೆದುರೇ ದಾರುಣ ಸಾವು

ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ಮಸಣಶೆಟ್ಟಿ ಕುಡಿತದ ದಾಸನಾಗಿದ್ದ ಎನ್ನಲಾಗಿದೆ. ಮಸಣಶೆಟ್ಟಿಯದ್ದು ಚಿಕ್ಕಮನೆ ಹಾಗೂ ಆಸ್ತಿ ಜಮೀನು ಇಲ್ಲ ಎಂಬ ಕಾರಣ ಎರಡು ಬಾರಿ ನೋಡಿ ಬಂದ ಹೆಣ್ಣಿನ ಕಡೆಯವರು ತಿರಸ್ಕರಿಸಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಾಗಿದ್ದ ಮಸಣಶೆಟ್ಟಿ ಕುಡಿತದ ದಾಸನಾಗಿದ್ದ. ಇಂದು ಬೆಳಗ್ಗೆ ಹೈ ಟೆನ್ಷನ್ ಕಂಬ ಏರಿದ್ದ. ತಾಯಿಯ ಕಣ್ಣೆದುರೇ ದಾರುಣವಾಗಿ ಮೃತಪಟ್ಟಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 18, 2025 12:15 PM