Chamarajanagara Drought Effect: ಬರದಿಂದ ಮೇವು ಸಿಗದೇ ಸಂತೆಯಲ್ಲಿ ಕಡಿಮೆ ಮೊತ್ತಕ್ಕೆ ದನಗಳ ಮಾರಾಟ

| Updated By: ಸಾಧು ಶ್ರೀನಾಥ್​

Updated on: Oct 05, 2023 | 7:18 PM

ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಜಾನುವಾರುಗಳ ಸಂತೆಯಿತ್ತು. ಇಲ್ಲಿ ದನಕರಗಳಿಗೆ ಮೇವು ನೀಡಲು ಸಾದ್ಯವಾಗದ ರೈತರು ಸಿಕ್ಕ ಬೆಲೆಗೆ ಗೋವುಗಳನ್ನ ಮಾರಾಟ ಮಾಡುತ್ತಿದ್ದಾರೆ. ಇನ್ನು ಸಿಕ್ಕ ಅವಕಾಶವನ್ನ ಸದುಪಯೋಗಪಡಿಸಿ ಕೊಳ್ಳುತ್ತಿರುವ ಕಸಾಯಿಖಾನೆ ಮಾಲೀಕರು ಕಡಿಮೆ ಮೊತ್ತಕ್ಕೆ ರಾಸುಗಳನ್ನ ಕೊಂಡು ತಮಿಳುನಾಡು ಹಾಗೂ ಕೇರಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಬರದ ಛಾಯೆ ಗಡಿ ನಾಡು ಚಾಮರಾಜನಗರದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಅನ್ನೊದಕ್ಕೆ ಇಂದು ಗುರುವಾರ ನಡೆದ ಜಾನುವಾರು ಸಂತೆಯೆ ಸಾಕ್ಷಿಯಾಗಿದೆ. ಗೋವುಗಳಿಗೆ ಮೇವು ಒದಗಿಸಲಾಗದೆ ಕಡಿಮೆ ಹಣಕ್ಕೆ ಜಾನುವಾರುಗಳನ್ನ ರೈತ ಮಾರಾಟ ಮಾಡುತ್ತಿದ್ದಾನೆ ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.

ರೈತನ ಬದುಕು ಮಳೆ ಜೊತೆ ಆಡುವ ಜೂಜಾಟವಿದ್ದಂತೆ. ಮಳೆ ಬಂದ್ರೆ ಬೆಳೆ ಬೆಳೆಯಲು ಸಾದ್ಯ ಮಳೆ ಕೈ ಕೊಟ್ರೆ ಬೆಳೆ ಬೆಳೆಯಲು ಸಾದ್ಯವಿಲ್ಲದಂತಹ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಮಾಡ್ಕೊಂಡ ಸಾಲ ತೀರಿಸಲಾಗದೆ. ರೈತರು ಸಾಲದ ಶೂಲಕ್ಕೆ ಬಲಿಯಾಗ್ತಯಿದ್ದಾರೆ. ಈ ಬಾರಿ ಗಡಿ ನಾಡು ಚಾಮರಾಜನಗರದಲ್ಲಿ ನಿರ್ಧಿಷ್ಠ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೆರೆ ಕಟ್ಟೆಗಳು ನೀರಿಲ್ಲದೆ ಬತ್ತಿ ಹೋಗಿವೆ. ಇತ್ತ ಜಾನುವಾರುಗಳಿಗೆ ಕನಿಷ್ಠ ಮೇವು ಒದಗಿಸಲು ಸಾದ್ಯವಾಗದೆ ಅನ್ನದಾತರು ಪರದಾಡುತ್ತಿದ್ದಾನೆ.

ಇನ್ನು ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಜಾನುವಾರುಗಳ ಸಂತೆಯಿತ್ತು. ಇಲ್ಲಿ ದನಕರಗಳಿಗೆ ಮೇವು ನೀಡಲು ಸಾದ್ಯವಾಗದ ರೈತರು ಸಿಕ್ಕ ಬೆಲೆಗೆ ಗೋವುಗಳನ್ನ ಮಾರಾಟ ಮಾಡುತ್ತಿದ್ದಾರೆ. ಇನ್ನು ಸಿಕ್ಕ ಅವಕಾಶವನ್ನ ಸದುಪಯೋಗಪಡಿಸಿ ಕೊಳ್ಳುತ್ತಿರುವ ಕಸಾಯಿಖಾನೆ ಮಾಲೀಕರು ಕಡಿಮೆ ಮೊತ್ತಕ್ಕೆ ರಾಸುಗಳನ್ನ ಕೊಂಡು ತಮಿಳುನಾಡು ಹಾಗೂ ಕೇರಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಅದೇನೆ ಹೇಳಿ ಮಳೆಯಿಲ್ಲದೆ ಬೆಳೆದ ಬೆಳೆ ಕೈ ಕೊಟ್ಟಿದೆ. ಇತ್ತ ಜಾನುವಾರುಗಳಿಗೆ ಮೇವಿಲ್ಲ, ಬೆಳೆಗಾಗಿ ಸಹಕಾರಿ ಬ್ಯಾಂಕ್ ಗಳಲ್ಲಿ ಮಾಡ್ಕೊಂಡ ಸಾಲ ಮತ್ತೊಂದೆಡೆ. ಇಂತ ಪರಿಸ್ಥಿತಿಯಲ್ಲಿ ಸಿಲುಕಿದ ಅನ್ನದಾತನ ಬದುಕು ಮೂರಾ ಬಟ್ಟೆಯಾಗಿದೆ. ಆದಷ್ಟು ಬೇಗ ರಾಜ್ಯ ಸರ್ಕಾರ ಬರ ಪರಿಹಾರ ಘೋಷಣೆ ಮಾಡಿ ಜಾನುವಾರುಗಳಿಗೆ ಸೂಕ್ತ ಮೇವನ್ನ ಒದಗಿಸಲಿ ಎಂಬುದೆ ನಮ್ಮ ಆಶಯ.

Follow us on