ಚಾಮರಾಜನಗರ ಕ್ಷೇತ್ರದಿಂದ ಅಳಿಯನನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿ ಸಂಸದ ವಿ ಶ್ರೀನಿವಾಸ್ ಪ್ರಸಾದ್!

ಚಾಮರಾಜನಗರ ಕ್ಷೇತ್ರದಿಂದ ಅಳಿಯನನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿ ಸಂಸದ ವಿ ಶ್ರೀನಿವಾಸ್ ಪ್ರಸಾದ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 06, 2024 | 10:57 AM

ರಾಜಕೀಯದಲ್ಲಿ ವಂಶಪಾರ್ಯಂಪರವನ್ನು ತೀವ್ರವಾಗಿ ವಿರೋಧಿಸುವ ಬಿಜೆಪಿ ಕರ್ನಾಟಕ್ಕದಲ್ಲಿ ಅದಕ್ಕೆ ಕುಮ್ಮಕ್ಕು ನೀಡುತ್ತಿರುವಂತೆ ಭಾಸವಾಗುತ್ತದೆ. ದಶಕಗಳಿಂದ ರಾಜಕಾರಣದಲ್ಲಿರುವ 76-ವರ್ಷ ವಯಸ್ಸಿನ ವಿ ಶ್ರೀನಿವಾಸ್ ಪ್ರಸಾದ್ ತಮ್ಮ ಸ್ಥಾನಕ್ಕೆ ಅಳಿಯನನ್ನು ತರಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ನೂರಾರು ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದರೂ ಅವರನ್ನು ತಮ್ಮ ಸ್ಥಾನಕ್ಕೆ ಪರಿಗಣಿಸುವ ಉದಾರತೆ ಪ್ರಜ್ಞಾವಂತ ಮತ್ತು ಪ್ರಬುದ್ಧ ರಾಜಕಾರಣಿ ಪ್ರಸಾದ್ ಅವರಲ್ಲಿದಿರುವುದು ದುರಂತ.

ಚಾಮರಾಜನಗರ: ಇವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ವಿ ಶ್ರೀನಿವಾಸ್ ಪ್ರಸಾದ್ (V Srinivas Prasad) ಅವರ ಅಳಿಯ, ಹೆಸರು ಡಾ ಎನ್ ಎಸ್ ಮೋಹನ್ (Dr NS Mohan). ಕಳೆದ ತಿಂಗಳುವರೆಗೆ ಮೋಹನ್ ಬೆಂಗಳೂರು ನಗರದಲ್ಲಿರುವ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಬೆನ್ನುಹುರಿ ತಜ್ಞ (spine surgeon) ಮತ್ತು ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಸರ್ಕಾರೀ ಹುದ್ದೆಯಲ್ಲಿದ್ದು ಸಂಪೂರ್ಣವಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಕೆಲಸಕ್ಕೆ ರಾಜೀನಾಮೆ ನೀಡಿ ತನ್ನ ಮಾವನ ಕ್ಷೇತ್ರ ರಾಜಕೀಯಕ್ಕೆ ಬಂದಿರುವುದಾಗಿ ಮೋಹನ್ ಹೇಳುತ್ತಾರೆ. ಆಡಳಿತ ಸುಧಾರಣೆ ಮತ್ತು ಸರ್ಕಾರಿ ಹುದ್ದೆಯಲ್ಲಿ ಕೇವಲ ಆರೋಗ್ಯ ಕ್ಷೇತ್ರಕ್ಕೆ ಸೀಮಿತವಾಗಿದ್ದ ತಮ್ಮ ಸೇವಾಕಾಂಕ್ಷೆಯನ್ನು ವಿಸ್ತರಿಸುವ ಗುರಿಯೊಂದಿಗೆ ಬಿಜೆಪಿ ಸೇರಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಇದೆ ಎಂದು ಹೇಳುವ ಮೋಹನ್ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ ಹೆಚ್ಚೆಚ್ಚು ಕೈಗಾರಿಕೆಗಳನ್ನು ತರುವ ಗುರಿ ಇಟ್ಟುಕೊಂಡಿರುವುದಾಗಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ