ಬಿಜೆಪಿಯ ಧೋರಣೆಗಳಿಂದ ಯಾವುದಾದರೂ ಹಿಂದೂಗೆ ಲಾಭವಾಗಿದೆಯಾ? ಸಂತೋಷ್ ಲಾಡ್, ಸಚಿವ
ಬಿಜೆಪಿ ನಾಯಕರು ಯಾವಾಗಲೂ ಹಿಂದೂ, ಹಿಂದೂತ್ವ ಅನ್ನುತ್ತಾರೆ, ಕಳೆದ 10 ವರ್ಷಗಳಿಂದ ಅವರು ಅಧಿಕಾರ ನಡೆಸುತ್ತಿದ್ದಾರೆ, ಯಾವುದಾದರೂ ಹಿಂದೂಗೆ ಹೆಚ್ಚುವರಿ ಲಾಭವಾಗಿದೆಯಾ ಎಂದು ಸಚಿವ ಸಂತೋಷ್ ಲಾಡ್ ಕೇಳಿದರು. ಅವರ ಧೋರಣೆಯಿಂದ ಕೇವಲ ಬಿಜೆಪಿಗೆ ಮಾತ್ರ ಲಾಭವಿದೆ, ದೇಶದ ಬೇರೆ ಯಾವುದೇ ಹಿಂದೂಗೆ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.
ಹುಬ್ಬಳ್ಳಿ: ಕರಸೇವಕ ಶ್ರೀಕಾಂತ್ ಪೂಜಾರಿ (Srikanth Pujari) ಬಂಧನದ ವಿಚಾರವನ್ನು ಬಿಜೆಪಿ ನಾಯಕರು ವಿನಾಕಾರಣ ದೊಡ್ಡದನ್ನಾಗಿ ಮಾಡಿ ಲೋಕಸಭಾ ಚುನಾವಣೆ (Lok Sabha polls) ಹತ್ತಿರವಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದರು. ಹಳೆಯ ಮತ್ತು ಬಿಟ್ಟುಹೋಗಿದ್ದ ಪ್ರಕರಣಗಳ ಆಧಾರದಲ್ಲಿ ಶ್ರೀಕಾಂತ್ ಹಾಗೂ ಇತರರನ್ನು ಬಂಧಿಸಲಾಗಿದ್ದು ಅದರಲ್ಲಿ 32 ವರ್ಷಗಳ ಹಿಂದಿನ ಕರಸೇವೆಯ ಪ್ರಕರಣ ಸಹ ಸೇರಿದೆ. ಬಂಧಿತ 36 ಜನರಲ್ಲಿ ಬೇರೆಯವರೂ ಕೂಡ ಹಿಂದೂಗಳಿದ್ದಾರೆ, ಅವರ ಬಗ್ಗೆ ಬಿಜೆಪಿ ಯಾಕೆ ಪ್ರತಿಭಟನೆ ನಡೆಸುತ್ತಿಲ್ಲ? ಅವರ ಪೈಕಿ 10 ಮುಸಲ್ಮಾನರಿದ್ದು ಬಂಧಿಸಿದ್ದು ಒಬ್ಬ ಮುಸ್ಲಿಂ ಸಮುದಾಯದ ಇನ್ಸ್ ಪೆಕ್ಟರ್ ಅಂತ ಹೇಳೋದ್ರಲ್ಲಿ ಏನಾದರೂ ಅರ್ಥವಿದೆಯಾ? ಎಂದು ಲಾಡ್ ಪ್ರಶ್ನಿಸಿದರು. ಚುನಾವಣೆ ಹತ್ತಿರವಾದಾಗ ಬಿಜೆಪಿ ನಾಯಕರು ಇಂಥ ಸಂದರ್ಭಗಳಿಗಾಗಿ ತವಕಿಸಿ ವೋಟುಗಳ ಧ್ರುವೀಕರಣಕ್ಕೆ ಬಳಸಿಕೊಳ್ಳುತ್ತಾರೆ. ವಿಷಯದ ಬಗ್ಗೆ ಗೃಹ ಸಚಿವ ಮತ್ತು ಮುಖ್ಯಮಂತ್ರಿಯವರು ಈಗಾಗಲೇ ಪ್ರತಿಕ್ರಿಯೆ ನೀಡಿರುವುದರಿಂದ ತಾನೇನೂ ಹೆಚ್ಚಿಗೆ ಹೇಳಬೇಕಿಲ್ಲ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ