IND vs NZ: ರೋಚಕ ಘಟ್ಟದಲ್ಲಿ ಭಾರತದ ಡ್ರೆಸ್ಸಿಂಗ್ ರೂಂ ವಾತಾವರಣ ಹೇಗಿತ್ತು? ಗೆದ್ದ ಬಳಿಕ ಏನಾಯ್ತು? ವಿಡಿಯೋ ನೋಡಿ

Updated on: Mar 10, 2025 | 7:33 PM

Champions Trophy 2025: ಕಿವೀಸ್ ನೀಡಿದ 251 ರನ್​ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆಯಿತ್ತಾದರೂ, ನಿರ್ಣಾಯಕ ಘಟ್ಟದಲ್ಲಿ ವಿಕೆಟ್​ಗಳನ್ನು ಕಳೆದುಕೊಂಡಿತು. ಇದರಿಂದ ತಂಡದ ಗೆಲುವಿನ ಬಗ್ಗೆ ಅನುಮಾನ ಮೂಡಿತ್ತು. ಒಂದೊಳ್ಳೆ ಜೊತೆಯಾಟ ಬೆಳೆಯುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಬ್ಯಾಟರ್​ಗಳು ವಿಕೆಟ್ ಕೈಚೆಲ್ಲುತ್ತಿದ್ದರು. ಹೀಗಾಗಿ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ನೀರವ ಮೌನ ಆವರಿಸಿತ್ತು.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಷ್ಟಕ್ಕೂ ಈ ಗೆಲುವು ತಂಡಕ್ಕೆ ಸುಲಭವಾಗಿ ಧಕ್ಕಲಿಲ್ಲ. ಕಿವೀಸ್ ನೀಡಿದ 251 ರನ್​ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆಯಿತ್ತಾದರೂ, ನಿರ್ಣಾಯಕ ಘಟ್ಟದಲ್ಲಿ ವಿಕೆಟ್​ಗಳನ್ನು ಕಳೆದುಕೊಂಡಿತು. ಇದರಿಂದ ತಂಡದ ಗೆಲುವಿನ ಬಗ್ಗೆ ಅನುಮಾನ ಮೂಡಿತ್ತು. ಒಂದೊಳ್ಳೆ ಜೊತೆಯಾಟ ಬೆಳೆಯುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಬ್ಯಾಟರ್​ಗಳು ವಿಕೆಟ್ ಕೈಚೆಲ್ಲುತ್ತಿದ್ದರು. ಸೆಟಲ್ ಆಗಿದ್ದ ರೋಹಿತ್, ಶ್ರೇಯಸ್, ಅಕ್ಷರ್, ಹಾರ್ದಿಕ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡಾಗ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ನೀರವ ಮೌನ ಆವರಿಸಿತ್ತು. ಆದರೆ ರವೀಂದ್ರ ಜಡೇಜಾ ಗೆಲುವಿನ ಬೌಂಡರಿ ಬಾರಿಸಿದ ಬಳಿಕ ಇಡೀ ತಂಡವೇ ಸಂಭ್ರಮಾಚರಣೆಯಲ್ಲಿ ಮಿಂದೆತ್ತಿತು. ಅದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.