Loading video

‘ನನಗೂ ಉಸಿರುಗಟ್ಟಿತ್ತು’; ಚಿನ್ನಸ್ವಾಮಿ ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ

Updated By: ರಾಜೇಶ್ ದುಗ್ಗುಮನೆ

Updated on: Jun 05, 2025 | 10:40 AM

ಬೆಂಗಳೂರಿನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಬರೋಬ್ಬರಿ 11 ಜನರು ಮೃತಪಟ್ಟರು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಈ ದುರಂತ ನಡೆಯಿತು. ಆ ಬಳಿಕ ಜನರು ಸಾಕಷ್ಟು ತೊಂದರೆ ಅನುಭವಿಸಿದರು. ಚಂದನ್ ಶೆಟ್ಟಿ ಕೂಡ ಇದರಲ್ಲಿ ಭಾಗಿ ಆಗಿದ್ದರು. ಅವರು ಅನುಭವಿಸಿದ ತೊಂದರೆ ಬಗ್ಗೆ ಹೇಳಿಕೊಂಡಿದ್ದಾರೆ.

ಚಿನ್ನಸ್ವಾಮಿ (M Chinnaswamy) ಸ್ಟೇಡಿಯಂ ಹೊರ ಭಾಗದಲ್ಲಿ ನಡೆದ ದುರಂತದಲ್ಲಿ ಬರೋಬ್ಬರಿ 11 ಜನರು ಮೃತಪಟ್ಟಿದ್ದಾರೆ. ಈ ಘಟನೆ ವೇಳೆ ಗಾಯಕ, ನಟ ಚಂದನ್ ಶೆಟ್ಟಿ ಕೂಡ ಅಲ್ಲಿದ್ದರು. ಆ ಕರಾಳ ಅನುಭವದ ಬಗ್ಗೆ ಅವರು ಮಾತನಾಡಿದ್ದಾರೆ. ‘ಖುಷಿಯಿಂದ ಸ್ಟೇಡಿಯಂನ ಗೇಟ್ ನಂಬರ್ 3 ಬಳಿ ಹೋದೆ. ಆದರೆ, ಗೇಟ್ ಬಳಿಗೂ ಹೋಗಕೆ ಆಗಲಿಲ್ಲ. ಆಮೇಲೆ 10ನೇ ನಂಬರ್ ಗೇಟ್ ಬಳಿ ಬಂದೆ. ಅಲ್ಲಿ ನನಗೆ ಒಮ್ಮೆ ಉಸಿರಾಡೋಕೂ ಕಷ್ಟ ಆಯ್ತು. 11 ಜನರು ನಿಧನ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಯಾರು ಹೊಣೆ ಎಂದು ಹೇಳೋದು ಕಷ್ಟ. 2 ದಿನ ಬಿಟ್ಟು ಈವೇಂಟ್ ಮಾಡಬಹುದಿತ್ತು. ಆಸ್ಪತ್ರೆಯಲ್ಲಿ ಇರುವವರು ಬೇಗೆ ಚೇತರಿಕೆ ಕಾಣಲಿ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.