ಚಂದ್ರಶೇಖರ್ ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂತ ಹೇಳಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿರೋದು ಸುಳ್ಳಲ್ಲ

|

Updated on: Jun 27, 2024 | 7:25 PM

ಚಂದ್ರಶೇಖರ ಶ್ರೀಗಳು ಇಂದು ಬೆಂಗಳೂರಲ್ಲಿ ಹೇಳಿದ್ದು ಖಂಡಿತವಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪರಿಣಾಮ ಬೀರಿದೆ. ಅವರ ಮಾತಿನಲ್ಲಿ ಅದು ವ್ಯಕ್ತವಾಯಿತು. ಪ್ರಧಾನಿ ಮೋದಿ ಜೊತೆ ಭೇಟಿ ಜೂನ್ 29 ರಂದು 8ಗಂಟೆಗೆ ಅಂತ ಹೇಳಿದ್ದರೇ ಹೊರತು ಬೆಳಗ್ಗೆ 8 ಅಥವಾ ರಾತ್ರಿ 8 ಗಂಟೆ ಅಂತ ಹೇಳಿರಲಿಲ್ಲ, ಬೆಂಗಳೂರಲ್ಲೂ ಹೇಳಿರಲಿಲ್ಲ!

ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ತಲುಪಿದ್ದಾರೆ. ದೆಹಲಿ ಭೇಟಿಯ ಉದ್ದೇಶವನ್ನು ಮುಖ್ಯಮಂತ್ರಿಯವರು ಬೆಳಗ್ಗೆ ಬೆಂಗಳೂರಲ್ಲಿ ಹೇಳಿದ್ದರು. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಂಜೂರು ಮಾಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮತ್ತು ಅವುಗಳಿಗಾಗಿ ಅನುದಾನ ಮಂಜೂರು ಮಾಡಿಸಿಕೊಳ್ಳುವ ಬಗ್ಗೆ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ಇಂದು ಬೆಂಗಳೂರಲ್ಲಿ ಚಂದ್ರಶೇಖರ ಶ್ರೀಗಳು ಆಡಿದ ಮಾತಿನ ಬಗ್ಗೆ ಶಿವಕುಮಾರ್ ಸಮ್ಮುಖದಲ್ಲೇ ಕೇಳಿದಾಗ ಸಿದ್ದರಾಮಯ್ಯ ನಿಸ್ಸಂದೇಹವಾಗಿ ಡಿಸ್ಟರ್ಬ್ಡ್ ಅದರು. ಆದರೆ ಅವರು ಅದನ್ನು ಆಗ ತೋರಿಸಿಕೊಳ್ಳದೆ ಅದಾದ ಮೇಲೆ ಕೇಳಿದ ಪ್ರಶ್ನೆಯ ಸಂದರ್ಭದಲ್ಲಿ ಬಹಿರಂಗಗೊಳಿಸಿದರು. ಶ್ರೀಗಳು ಏನು ಹೇಳಿದ್ದಾರಪ್ಪ? ನಮ್ಮಲ್ಲಿರೋದು ಪ್ರಜಾಪ್ರಭುತ್ವ ವ್ಯವಸ್ಥೆ, ಹೈಕಮಾಂಡ್ ಹೇಳಿದಂತೆ ಎಲ್ಲವೂ ನಡೆಯುತ್ತದೆ, ಪಾಪ ಶ್ರೀಗಳಿಗೆ ಇದೆಲ್ಲ ಗೊತ್ತಿಲ್ಲ ಎಂದರು. ನಂತರ ಪತ್ರಕರ್ತರೊಬ್ಬರು ಪ್ರಧಾನಿ ಮೋದಿಯವರವ ಜೊತೆ ಭೇಟಿ ಬೆಳಗ್ಗೆ 8ಗಂಟೆಗಾ ಅಥವಾ ಸಾಯಂಕಾಲ 8 ಗಂಟೆಗಾ ಅಂತ ಕೇಳಿದಾಗ ರೇಗುವ ಅವರು ರಾತ್ರಿ 8ಗಂಟೆಗೆ ಅಂತ ಆಗ್ಲೇ ಹೇಳಲಿಲ್ವೇನಯ್ಯ ಅಂತ ಸಿಡುಕುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯನವರೇ ದಯವಿಟ್ಟು ಡಿಕೆ ಶಿವಕುಮಾರ್​ಗೆ ಸಿಎಂ ಸ್ಥಾನ ಬಿಟ್ಟುಕೊಡಿ: ಚಂದ್ರಶೇಖರಶ್ರೀ ಮನವಿ