‘ದರ್ಶನ್ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಪರಪ್ಪನ ಅಗ್ರಹಾರ ಜೈಲಿನ ಬಳಿ ಬರುವ ದರ್ಶನ್ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗಿದೆ. ದರ್ಶನ್ ಅವರನ್ನು ನೋಡಬೇಕು ಎಂದು ಎಲ್ಲ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಗೂ ದರ್ಶನ್ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಹಾಗಿದ್ದರೂ ಕೂಡ ಅಭಿಮಾನಿಗಳು ಹಠ ಮಾಡುತ್ತಿದ್ದಾರೆ. ಎಲ್ಲರೂ ದರ್ಶನ್ ಪರವಾಗಿ ಮಾತನಾಡುತ್ತಿದ್ದಾರೆ.
ನಟ ದರ್ಶನ್ ಅವರಿಗೆ ಇರುವ ಅಭಿಮಾನಿ (Darshan Fans) ಬಳಗ ತುಂಬ ದೊಡ್ಡದು. ಅವರೆಲ್ಲರಿಗೂ ಈಗ ಬೇಸರ ಆಗಿದೆ. ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದ ನಂತರ ಅನೇಕ ಅಭಿಮಾನಿಗಳು ಜೈಲಿನ ಬಳಿ ಬರುತ್ತಿದ್ದಾರೆ. ದರ್ಶನ್ ಅವರನ್ನು ನೋಡಬೇಕು ಎಂಬುದೇ ಎಲ್ಲ ಅಭಿಮಾನಿಗಳ ಬೇಡಿಕೆ. ಈ ಮೊದಲು ದರ್ಶನ್ ಅವರು ವಿಶೇಷಚೇತನ ಅಭಿಮಾನಿಯ ಮನೆಯವರಿಗೆ ಆಟೋ ರಿಕ್ಷಾ ಕೊಡಿಸಿದ್ದರು. ಆ ಮೂಲಕ ಅವರ ಕುಟುಂಬಕ್ಕೆ ನೆರವಾಗಿದ್ದರು. ದರ್ಶನ್ (Darshan) ಜೈಲು ಸೇರಿದ ನಂತರ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ ಎಂದು ವಿಶೇಷ ಚೇತನ ಅಭಿಮಾನಿಯ ತಂದೆ ಹೇಳಿದ್ದಾರೆ. ‘ರೇಣುಕಾ ಸ್ವಾಮಿ ಮಾಡಿದ ತಪ್ಪಿಗೆ ದರ್ಶನ್ ಅವರು ತಕ್ಕ ಶಿಕ್ಷೆ ನೀಡಿದ್ದಾರೆ’ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ. ಆ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos