ಚಂದ್ರನ ಮೇಲಿನ ತಾಪಮಾನ ವರದಿ ರವಾನಿಸಿದ ಪ್ರಗ್ಯಾನ್ ರೋವರ್, ಈ ಕುರಿತು ವಿವರಿಸಿದ ನೆಹರು ತಾರಾಲಯದ ನಿರ್ದೇಶಕ
ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಪ್ರಗ್ಯಾನ್ ರೋವರ್ (Pragyan rover) ತನ್ನ ಅಧ್ಯಯನ ಕಾರ್ಯಾರಂಭಿಸಿದೆ. ಈಗಾಗಲೇ ಚಂದ್ರನ ಮೇಲೆ ಫೋಟೋಗಳನ್ನು, ವಿಡಿಯೋಗಳನ್ನು ಇಸ್ರೋಗೆ ರವಾನಿಸಿದ್ದು, ಇದೀಗ ಪ್ರಗ್ಯಾನ್ ರೋವರ್ ಇದೇ ಮೊದಲ ಬಾರಿಗೆ ಚಂದ್ರಲ್ಲಿರುವ ಹಗಲಿನ ತಾಪಮಾನ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ.
ಬೆಂಗಳೂರು, (ಆಗಸ್ಟ್ 27): ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಪ್ರಗ್ಯಾನ್ ರೋವರ್ (Pragyan rover) ತನ್ನ ಅಧ್ಯಯನ ಕಾರ್ಯಾರಂಭಿಸಿದೆ. ಈಗಾಗಲೇ ಚಂದ್ರನ ಮೇಲೆ ಫೋಟೋಗಳನ್ನು, ವಿಡಿಯೋಗಳನ್ನು ಇಸ್ರೋಗೆ ರವಾನಿಸಿದ್ದು, ಇದೀಗ ಪ್ರಗ್ಯಾನ್ ರೋವರ್ ಇದೇ ಮೊದಲ ಬಾರಿಗೆ ಚಂದ್ರಲ್ಲಿರುವ ಹಗಲಿನ ತಾಪಮಾನ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಚಂದ್ರನ ಮೇಲಿರುವ ತಾಪಮಾನದ ಮಾಹಿತಿ ಬಹಿರಂಗಗೊಂಡಿದೆ. ವಿಕ್ರಮ್ ಲ್ಯಾಂಡರ್ ಸಹಾಯದಿಂದ ಚಂದ್ರನ ಮೇಲ್ಮಣ್ಣಿನ ತಾಪಮಾನ ಮಾಹಿತಿ ನೀಡಿದ್ದು, ಈ ಕುರಿತು ಇಸ್ರೋ ಗ್ರಾಫ್ ಬಿಡುಗಡೆ ಮಾಡಿದೆ. ಇನ್ನು ಈ ಬಗ್ಗೆ ಬೆಂಗಳೂರಿನ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ವಿವರಿಸಿದ್ದಾರೆ.