ಚನ್ನಪಟ್ಟಣದ ನೂರಾರು ಜೆಡಿ(ಎಸ್) ಕಾರ್ಯಕರ್ತರು ಕುಮಾರಸ್ವಾಮಿಗೆ ಗುಡ್ ಬೈ ಹೇಳಿ ಶಿವಕುಮಾರರನ್ನು ಆಲಂಗಿಸಿದರು!

ಚನ್ನಪಟ್ಟಣದ ನೂರಾರು ಜೆಡಿ(ಎಸ್) ಕಾರ್ಯಕರ್ತರು ಕುಮಾರಸ್ವಾಮಿಗೆ ಗುಡ್ ಬೈ ಹೇಳಿ ಶಿವಕುಮಾರರನ್ನು ಆಲಂಗಿಸಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 12, 2022 | 8:50 PM

ಮತ್ತೊಂದು ಗಮನಾರ್ಹ ಸಂಗತಿಯೇನೆಂದರೆ ರಾಮನಗರ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ನ ಡಿಕೆ ಸಹೋದರರು, ಬಿಜೆಪಿಯ ಸಿಪಿ ಯೋಗೀಶ್ವರ ಮತ್ತು ಜೆಡಿ(ಎಸ್)ನ ಕುಮಾರಸ್ವಾಮಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Bengaluru: ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಪಕ್ಷಾಂತರ ಪರ್ವ ಜೋರು ಹಿಡಿದಿದೆ. ಗುರುವಾರ ಚನ್ನಪಟ್ಟಣದ ಜೆಡಿ(ಎಸ್) ಘಟಕಕ್ಕೆ ದೊಡ್ಡ ಆಘಾತ ಎದುರಾಯಿತು. ಪಕ್ಷದ ಮುಖಂಡ ಮತ್ತು ಉದ್ಯಮಿ ಪ್ರಸನ್ನ (Prasanna) ಹಲವಾರು ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ (Congers) ಸೇರಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಜೆಡಿ(ಎಸ್) ಕಾರ್ಯಕರ್ತರನ್ನು ಬರಮಾಡಿಕೊಂಡರು. ರಾಮನಗರ ಸಂಸದ ಮತ್ತು ಶಿವಕುಮಾರ ಅವರ ಸಹೋದರ ಡಿಕೆ ಸುರೇಶ ಈ ಸಂದರ್ಭದಲ್ಲಿ ಹಾಜರಿದ್ದರು. ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಸ್ವಾಗತಿಸುವಾಗ ಒಬ್ಬ ಕಾರ್ಯಕರ್ತನಿಗೆ ಶಿವಕುಮಾರ ಸಲುಗೆ ಮತ್ತು ಪ್ರೀತಿಯಿಂದ ಕೆನ್ನೆಗೆ ಹೊಡೆದಂತೆ ಮಾಡುತ್ತಾರೆ. ಅಮೇಲೆ ಅವರೊಂದಿಗೆ ಆತ್ಮೀಯವಾಗಿ ಹರಟುತ್ತಾರೆ.

ಅಸಲಿಗೆ ಆ ವ್ಯಕ್ತಿ ಶಿವಕುಮಾರ ಮೊದಲಿನಿಂದಲೂ ಪರಿಚಯವಂತೆ. ಸಾತನೂರಿನವರು ಅಂತ ಶಿವಕುಮಾರ ಹೇಳುತ್ತಿರುವುದು ಕೇಳಿಸುತ್ತದೆ. ಅವರು ಪಕ್ಷಕ್ಕೆ ಬಂದಿರುವುದು ಶಿವಕುಮಾರ ಅವರಿಗೆ ಖುಷಿ ತಂದಿದೆ.

ಮತ್ತೊಂದು ಗಮನಾರ್ಹ ಸಂಗತಿಯೇನೆಂದರೆ ರಾಮನಗರ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ನ ಡಿಕೆ ಸಹೋದರರು, ಬಿಜೆಪಿಯ ಸಿಪಿ ಯೋಗೀಶ್ವರ ಮತ್ತು ಜೆಡಿ(ಎಸ್)ನ ಕುಮಾರಸ್ವಾಮಿ ನಡುವೆ ತ್ರಿಕೋನ ಸ್ಪರ್ಧೆ ನಡೆದಿದೆ. ಮುಂದಿನ ವಿಧಾನ ಸಭಾ ಚುನಾವಣೆಗೆ ಮೊದಲು ಮಾಡಬೇಕಿರುವ ಎಲ್ಲ ಕಸರತ್ತುಗಳಲ್ಲಿ ಅವರು ತೊಡಗಿದ್ದಾರೆ.

ಬಿಜೆಪಿ ಯೋಗೀಶ್ವರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಸಿಎನ್ ಅಶ್ವಥ ನಾರಾಯಣ ಅವರನ್ನು ನೆಚ್ಚಿಕೊಂಡಿದೆ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರದ ಶಾಸಕರಾಗಿದ್ದರೂ ಹೆಚ್ ಡಿಕೆ ಅವರ ಪ್ರಭಾವ ಕ್ಷೇತ್ರದಲ್ಲಿ ಜಾಸ್ತಿಯಿದೆ.

ಆದರೆ, ಜೆಡಿ(ಎಸ್) ಕಾರ್ಯಕರ್ತರು ಕುಮಾರಸ್ವಾಮಿ ಎದುರು, ಡಿಕೆ ಸಹೋದರರ ವಿರುದ್ಧ ಸೆಣಸಲು ತಮಗೆ ಬಲ ಸಾಲದು ಅಂತ ಹತಾಷೆಯಿಂದ ಹೇಳುತ್ತಿರುವುದು ಅವರಿಗೆ ಚಿಂತೆಗೀಡು ಮಾಡಿದೆ.

ಅಲ್ಲದೆ ಮೇಕೆದಾಟು ಯೋಜನೆಗಾಗಿ ಶಿವಕುಮಾರ ಸಾರಥ್ಯದಲ್ಲಿ ನಡೆದ ಪಾದಯಾತ್ರೆ ಈ ಭಾಗದಲ್ಲಿ ಕಾಂಗ್ರೆಸ್ ನೆಲೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  ಟ್ವೀಟ್ ಮೂಲಕ ಡಿಕೆಶಿಗೆ ರಮ್ಯಾ ಉಪದೇಶ; ನೀನೇ ಸಾಕಿದ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ ಅಸಹಾಯಕ ಡಿಕೆ ಶಿವಕುಮಾರ್ ಎಂದು ಅಪಹಾಸ್ಯ ಮಾಡಿದ ಬಿಜೆಪಿ