ತುಮಕೂರು: ಜೆಡಿಎಸ್-ಬಿಜೆಪಿ ಮೈತ್ರಿ ಸಮನ್ವಯ ಸಭೆಯಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ತುಮಕೂರು: ಜೆಡಿಎಸ್-ಬಿಜೆಪಿ ಮೈತ್ರಿ ಸಮನ್ವಯ ಸಭೆಯಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 25, 2024 | 6:13 PM

ಇಂದು ಜಿಲ್ಲೆಯ ತುರುವೇಕೆರೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಸಮನ್ವಯ ಸಭೆಯಲ್ಲಿ ಎರಡು ಪಕ್ಷಗಳ ಮುಖಂಡರ ಅಸಮಾಧಾನ ಭುಗಿಲೆದ್ದಿತು. ತುರುವೇಕೆರೆ ಕ್ಷೇತ್ರದ ಶಾಸಕ ಎಂಟಿ ಕೃಷ್ಣಪ್ಪ ಮತ್ತು ಕೊಂಡಜ್ಜಿ ವಿಶ್ವನಾಥ್ ಬೆಂಬಲಿಗರ ನಡುವೆ ಮಾತಿನ ಚಕಮಕಿಯನ್ನು ದೃಶ್ಯಗಳಲ್ಲಿ ನೋಡಬಹುದು. ಕೃಷ್ಣಪ್ಪ ಆಡಿದ ಮಾತಿಗೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನಗೊಂಡು ಕೂಗಾಡಲಾರಂಭಿಸಿದರು.

ತುಮಕೂರು: ದೃಶ್ಯಗಳಲ್ಲಿ ಕಾಣುತ್ತಿರುವ ಪ್ರ್ಯಾಕ್ಟಿಕಲ್ ಸಂಗತಿಯ ಬಗ್ಗೆ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜೊತೆ ಮೈತ್ರಿಯ (JDS-BJP alliance) ಮಾತುಕತೆ ನಡೆಸಲು ಹೋದಾಗ ಜೆಡಿಎಸ್ ನಾಯಕರು ಅದರಲ್ಲೂ ವಿಶೇಷವಾಗಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮನಗಂಡಿರಲಿಕ್ಕಿಲ್ಲ. ಜೆಡಿಎಸ್ ಬಾಹುಳ್ಯದ ಕ್ಷೇತ್ರಗಳಲ್ಲಿ ಅದರ ಮತ್ತು ಬಿಜೆಪಿ ಕಾರ್ಯಕರ್ತರ ಸಂಬಂಧ ಹಾವು ಮುಂಗುಸಿಯಂತಿದೆ. ಇಂದು ಜಿಲ್ಲೆಯ ತುರುವೇಕೆರೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಸಮನ್ವಯ ಸಭೆಯಲ್ಲಿ ಎರಡು ಪಕ್ಷಗಳ ಮುಖಂಡರ ಅಸಮಾಧಾನ ಭುಗಿಲೆದ್ದಿತು. ತುರುವೇಕೆರೆ ಕ್ಷೇತ್ರದ ಶಾಸಕ ಎಂಟಿ ಕೃಷ್ಣಪ್ಪ ಮತ್ತು ಕೊಂಡಜ್ಜಿ ವಿಶ್ವನಾಥ್ ಬೆಂಬಲಿಗರ ನಡುವೆ ಮಾತಿನ ಚಕಮಕಿಯನ್ನು ದೃಶ್ಯಗಳಲ್ಲಿ ನೋಡಬಹುದು. ಕೃಷ್ಣಪ್ಪ ಆಡಿದ ಮಾತಿಗೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನಗೊಂಡು ಕೂಗಾಡಲಾರಂಭಿಸಿದರು. ತುಮಕೂರು ಜಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna) ವೇದಿಕೆಯ ಮೇಲಿಂದ ಕಾರ್ಯಕರ್ತರನ್ನು ಸಮಾಧಾನಗೊಳಿಸುವ ವಿಫಲ ಯತ್ನ ನಡೆಸಿದರು. ಒಬ್ಬ ಜೆಡಿಎಸ್ ಕಾರ್ಯಕರ್ತನಂತೂ ವೇದಿಕೆ ಮೇಲೆ ಕುಳಿತಿದ್ದ ಪಕ್ಷದ ಮುಖಡರೊಬ್ಬರಿಗೆ, ಅಲ್ಯಾಕೆ ಇನ್ನೂ ಕುಳಿತಿದ್ದೀಯಾ, ಎದ್ ಬಾ, ಮಾನ ಮರ್ಯಾದಿ ಇಲ್ವಾ ನಿಂಗೆ ಅನ್ನುತ್ತಾರೆ. ಮುಂಬರುಬ ದಿನಗಳಲ್ಲಿ ಇಂಥ ದೃಶ್ಯಗಳು ಪದೇಪದೆ ಕಂಡುಬಂದರೆ ಆಶ್ಚರ್ಯಪಡಬೇಕಿಲ್ಲ. ಮಸಾಲೆ ಜಯರಾಂ, ಗೋಪಾಲಯ್ಯ ಮೊದಲಾದವರನ್ನು ಸಹ ವೇದಿಕೆ ಮೇಲೆ ನೋಡಬಹುದು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇನ್ನಷ್ಟು ಓದಿ:   ಕಂಗನಾ ಬಳಿಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರೆಡಿ ಆದ ಮತ್ತೋರ್ವ ಬಾಲಿವುಡ್ ನಟಿ