ನಮೀಬಿಯಾದಿಂದ ಮಧ್ಯಪ್ರದೇಶಕ್ಕೆ ಅಗಮಿಸಿದವು 8 ಚೀತಾಗಳು, ಚಿರತೆ ಮತ್ತು ಚೀತಾ ನಡುವಿನ ವ್ಯತ್ಯಾಸ ಗೊತ್ತಾ?
ಚಿರತೆಯ ಮೈಮೇಲೆ ಗುಲಾಬಿ ಹೂವಿನಾಕಾರದ ಗುರುತುಗಳಿದ್ದರೆ ಚೀತಾಗಳ ಮೈಮೇಲೆ ದುಂಡು ಇಲ್ಲವೇ ಮೊಟ್ಟೆಯಾಕಾರದ ಗುರುತುಗಳಿವೆ. ದೇಶದಲ್ಲಿ 1952 ರಲ್ಲೇ ಚೀತಾ ಸಂತತಿ ನಶಿಸಿಹೋಗಿದೆಯೆಂದು ಆಗಿನ ಭಾರತ ಸರ್ಕಾರ ಘೋಷಿಸಿತ್ತು.
ಭಾರತದಲ್ಲಿ ದಶಕಗಳ ಹಿಂದೆಯೇ ನಶಿಸಿಹೋಗಿರುವ ಚೀತಾಗಳ (cheetahs) ಸಂತತಿಯನ್ನು ಪುನ: ಸ್ಥಾಪಿಸಿ, ಪೋಷಿಸಿ, ಸಂರಕ್ಷಿಸಲು ನಮೀಬಿಯಾದಿಂದ (Namibia) 8 ಚೀತಾಗಳನ್ನು ನಮೀಬಿಯಾದಿಂದ ತರಿಸಿಕೊಳ್ಳಲಾಗಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಜನ್ಮದಿನವಾದ ಸೆಪ್ಟೆಂಬರ್ 17 ರಂದು ಚೀತಾಗಳು ವಿಮಾನವೊಂದರಲ್ಲಿ ಮಧ್ಯಪ್ರದೇಶದ ವಿಮಾನವೊಂದರಲ್ಲಿ ಬಂದಿಳಿದವು. ಇವುಗಳನ್ನು ಮಧ್ಯ ಪ್ರದೇಶದಲ್ಲಿರುವ ಕುನೋ ಉದ್ಯಾನವನದಲ್ಲಿ ಸಂರಕ್ಷಿಸಿ ಪೋಷಿಸಲಾಗುತ್ತದೆ. ನಮ್ಮಲ್ಲಿ ಅನೇಕರು ಚಿರತೆಗಳನ್ನೇ ಚೀತಾಗಳೆಂದು ಭಾವಿಸುತ್ತ್ತಾರೆ. ಅವು ನೋಡಲು ಒಂದೇ ಥರ ಕಾಣುತ್ತವೆಯಾದರೂ ಸೂಕ್ಷ್ಮವಾಗಿ ಗಮನಿಸಿದರೆ ವ್ಯತ್ಯಾಸ ಗೊತ್ತಾಗುತ್ತದೆ ಮಾರಾಯ್ರೇ. ಚಿರತೆಯ ಮೈಮೇಲೆ ಗುಲಾಬಿ ಹೂವಿನಾಕಾರದ ಗುರುತುಗಳಿದ್ದರೆ ಚೀತಾಗಳ ಮೈಮೇಲೆ ದುಂಡು ಇಲ್ಲವೇ ಮೊಟ್ಟೆಯಾಕಾರದ ಗುರುತುಗಳಿವೆ. ದೇಶದಲ್ಲಿ 1952 ರಲ್ಲೇ ಚೀತಾ ಸಂತತಿ ನಶಿಸಿಹೋಗಿದೆಯೆಂದು ಆಗಿನ ಭಾರತ ಸರ್ಕಾರ ಘೋಷಿಸಿತ್ತು.