ಚೇತನಾ ನಮ್ಮ ಮಾತು ಕೇಳುತ್ತಿರಲಿಲ್ಲ, ಫ್ರೆಂಡ್ಸ್ ಮಾತುಗಳೇ ಅವಳಿಗೆ ಮುಖ್ಯವಾಗಿತ್ತು: ಚೇತನಾ ರಾಜ್ ಅಜ್ಜಿ

ಅವಳಿಗೆ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವ ಉಮೇದಿ ಇತ್ತು, ನಾನು ದೊಡ್ಡ ಸ್ಟಾರ್ ಆಗ್ತೀನಿ ಅನ್ನುತ್ತಿದ್ದಳು, ಗೆಳೆಯರ ಮಾತು ಕಟ್ಟಿಕೊಂಡು ಓಡಾಡುತ್ತಿದ್ದಳು. ಈಗಷ್ಟೇ ಅವಳು ಡಿಗ್ರೀ ವ್ಯಾಸಂಗ ಮುಗಿಸಿದ್ದಳು, ಎಂದು ನಾರಾಯಣಮ್ಮ ಹೇಳಿದರು.

TV9kannada Web Team

| Edited By: Arun Belly

May 17, 2022 | 4:56 PM

Nelamangala: ಕಿರುತೆರೆ ನಟಿ ಮತ್ತು ಕೆಲ ಸಿನಿಮಾಗಳಲ್ಲೂ ನಟಿಸಿದ್ದ ಚೇತನಾ ರಾಜ್ (Chethana Raj) ಅದ್ಯಾವ ಸ್ನೇಹಿತರು ಸೊಂಟದ ಭಾಗದಲ್ಲಿ ಕೊಬ್ಬಿನಾಂಶ ಜಾಸ್ತಿಯಾಗಿದೆ ಅಂತ ಹೇಳಿದರೋ? ಕೊಬ್ಬಿನಾಂಶ (fat deposition) ತೆಗೆಸಲು ಸೋಮಾವಾರ ಬೆಂಗಳೂರಿನ ಆಸ್ಪತ್ರಯೊಂದಕ್ಕೆ ದಾಖಲಾಗಿದ್ದ ಅವರು ಅಲ್ಲಿಂದ ವಾಪಸ್ಸಾಗಿದ್ದು ಮಾತ್ರ ಹೆಣವಾಗಿ. ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದ ಚೇತನಾ ಅವರ ಬದುಕು ಕೇವಲ 21 ನೇ ವಯಸ್ಸಿಗೆ ಮುರುಟಿಹೋಗಿದೆ. ಅವರ ಕುಟುಂಬದವರು ಆಸ್ಪತ್ರೆ ಮತ್ತು ಶಸ್ತ್ರಚಿಕಿತ್ಸೆ (surgery) ನಡೆಸಿದ ವೈದ್ಯರ ನಿರ್ಲಕ್ಷ್ಯದಿಂದ ಚೇತನಾ ಸತ್ತಿದ್ದಾರೆ ಅಂತ ಅರೋಪಿಸುತ್ತಿದ್ದಾರೆ. ನಟಿಯ ಅಜ್ಜಿ ನಾರಾಯಣಮ್ಮನವರು ಟಿವಿ9 ಕನ್ನಡ ವಾಹಿನಿಯೊದಿಗೆ ದುಃಖವನ್ನು ಹಂಚಿಕೊಳ್ಳುವಾಗ ತಮ್ಮ ಮೊಮ್ಮಗಳು ದಪ್ಪವೇನೂ ಇರಲಿಲ್ಲ, ಆದರೆ ಅವಳು ಸ್ನೇಹಿತರ ಮಾತು ಕೇಳಿ ಹಾಳಾದಳು ಎಂದು ಹೇಳಿದರು.

ನೀನು ದಪ್ಪ ಇಲ್ಲ, ನಿನ್ನ ಫ್ರೆಂಡ್ ಮಾತುಗಳನ್ನು ಕೇಳಬೇಡ ಅಂತ ನಾವು ಹೇಳಿದರೂ ಅವಳು ಕೇಳಲಿಲ್ಲ. ಕೊಬ್ಬು ಕರಗಿಸಲು ಅವಳು ಯಾವ ಮಾತ್ರೆಯನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಅವಳು ನಮಗಿಂತ ಜಾಸ್ತಿ ತನ್ನ ಫ್ರೆಂಡ್ಸ್ ಮಾತಿಗೆ ಬೆಲೆ ನೀಡಿದಳು. ಅವಳ ಸ್ನೇಹಿತರೇ ಒಂದೂವರೆ ಲಕ್ಷಕ್ಕಿಂತ ಜಾಸ್ತಿ ಹಣವನ್ನು ಹೊಂದಿಸಿ ಅವಳನ್ನು ಆಪರೇಶನ್ ಮಾಡಿಸಿಕೊಳ್ಳಲು ಕಳಿಸಿದ್ದಾರೆ. ಅವಳಿಗೆ ಆಪರೇಶನ್ ಮಾಡಿದ ಡಾಕ್ಟರ್ ತಂದೆ-ತಾಯಿಗಳ ಸಮ್ಮತಿಗೂ ಕಾಯದೆ ಆಪರೇಶನ್ ಮಾಡಿಬಿಟ್ಟಿದ್ದಾರೆ. ಅವಳ ತಾಯಿ ರಾತ್ರಿ 9 ಗಂಟೆಗೆ ಆಸ್ಪತ್ರೆಗೆ ಹೋಗಿದ್ದಾಳೆ. ಮಗಳ ಮುಖವನ್ನು ನೋಡುವುದು ಕೂಡ ಅವಳಿಗೆ ಸಾಧ್ಯವಾಗಿಲ್ಲ ಎಂದು ನಾರಾಯಣಮ್ಮ ಹೇಳಿದ್ದಾರೆ.

ಅವಳಿಗೆ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವ ಉಮೇದಿ ಇತ್ತು, ನಾನು ದೊಡ್ಡ ಸ್ಟಾರ್ ಆಗ್ತೀನಿ ಅನ್ನುತ್ತಿದ್ದಳು, ಗೆಳೆಯರ ಮಾತು ಕಟ್ಟಿಕೊಂಡು ಓಡಾಡುತ್ತಿದ್ದಳು. ಈಗಷ್ಟೇ ಅವಳು ಡಿಗ್ರೀ ವ್ಯಾಸಂಗ ಮುಗಿಸಿದ್ದಳು, ಎಂದು ನಾರಾಯಣಮ್ಮ ಹೇಳಿದರು.

ಇದನ್ನೂ ಓದಿ:   Chetana Raj Death: ಫ್ಯಾಟ್​ ಸರ್ಜರಿಗೆ ಚೇತನಾ ರಾಜ್​ ಕಟ್ಟಿದ್ದ ಹಣ ಎಷ್ಟು? ಸತ್ತ ಮೇಲೂ ಹೆಚ್ಚಿತು ಆಸ್ಪತ್ರೆ ಬಿಲ್​

Follow us on

Click on your DTH Provider to Add TV9 Kannada