AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಚೇತನಾ ರಾಜ್ ಅಂತ್ಯಕ್ರಿಯೆ: ಮುಗಿಲುಮುಟ್ಟಿದ ಕುಟುಂಬದವರ ಆಕ್ರಂದನ

ನಟಿ ಚೇತನಾ ರಾಜ್ ಅಂತ್ಯಕ್ರಿಯೆ: ಮುಗಿಲುಮುಟ್ಟಿದ ಕುಟುಂಬದವರ ಆಕ್ರಂದನ

TV9 Web
| Updated By: ರಾಜೇಶ್ ದುಗ್ಗುಮನೆ

Updated on:May 17, 2022 | 7:11 PM

ಕೇವಲ 22ನೇ ವಯಸ್ಸಿಗೆ ಪುತ್ರಿಯನ್ನು ಕಳೆದುಕೊಂಡಿರುವ ಪೋಷಕರು ದುಃಖದಲ್ಲಿ ಕೈ ತೊಳೆಯುತ್ತಿದ್ದಾರೆ. ಸಂಜೆ ವೇಳೆ ಚೇತನಾ ರಾಜ್ ಅವರ ಅಂತ್ಯಕ್ರಿಯೆ ನೆರವೇರಿದೆ.

ಕಿರುತೆರೆ ನಟಿ ಚೇತನಾ ರಾಜ್ ಅವರು (Chetan Raj) ಸೊಂಟದ ಫ್ಯಾಟ್​ ಕರಗಿಸಿಕೊಳ್ಳಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ನಿಧನ ಹೊಂದಿದ್ದಾರೆ. ಕೇವಲ 22ನೇ ವಯಸ್ಸಿಗೆ ಪುತ್ರಿಯನ್ನು ಕಳೆದುಕೊಂಡಿರುವ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮೇ 17ರ ಸಂಜೆ ವೇಳೆ ಚೇತನಾ ರಾಜ್ ಅವರ ಅಂತ್ಯಕ್ರಿಯೆ ನೆರವೇರಿದೆ. ತಂದೆ-ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಅವರ ಸಾವು ಅನೇಕರಿಗೆ ಶಾಕ್ ತಂದಿದೆ. ಅವರ ಸಾವಿಗೆ ಆಸ್ಪತ್ರೆಯವರ ನಿರ್ಲಕ್ಷ್ಯ ಕಾರಣ ಎಂದು ಎಲ್ಲರೂ ದೂರುತ್ತಿದ್ದಾರೆ. ಯಾರು ಏನೇ ಮಾಡಿದರೂ ಹೋದ ಜೀವ ಮತ್ತೆ ಹಿಂದಿರುಗುವುದಿಲ್ಲ. ಚೇತನಾ ರಾಜ್ ಸಾವಿನ ಕುರಿತು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: May 17, 2022 06:41 PM