ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಜಮೀರ್ ಅಹ್ಮದ್ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಭೇಟಿಯಾದರು!
ಪ್ರದೇಶ ಕಾಂಗ್ರೆಸ್ ಘಟಕದಲ್ಲಿ ಹಿರಿ ನಾಯಕ ಸಿದ್ದರಾಮಯ್ಯನವರೊಂದಿಗೆ ಗುರುತಿಸಿಕೊಂಡಿರುವ ಜಮೀರ್ ಇದ್ದಕ್ಕಿದ್ದಂತೆ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು ಸಾಕಷ್ಟು ಕುತೂಹಲವಂತೂ ಮೂಡಿಸಿದೆ. ಜಮೀರ್ ಅವರೊಂದಿಗೆ ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಇದ್ದರು.
ಬೆಂಗಳೂರು: ಬಹಳ ಕುತೂಹಲಕಾರಿ ಸಂಗತಿಯೊಂದು ಮಂಗಳವಾರ ಬೆಂಗಳೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಬೆಳಗಿನ ಸಮಯದಲ್ಲಿ ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿಯವರನ್ನು (Bsavaraj Bommai) ಅವರ ಆರ್ ಟಿ ನಗರ ನಿವಾದಲ್ಲಿ ಭೇಟಿಯಾದರು. ಪ್ರದೇಶ ಕಾಂಗ್ರೆಸ್ ಘಟಕದಲ್ಲಿ ಹಿರಿ ನಾಯಕ ಸಿದ್ದರಾಮಯ್ಯನವರೊಂದಿಗೆ (Siddaramaiah) ಗುರುತಿಸಿಕೊಂಡಿರುವ ಜಮೀರ್ ಇದ್ದಕ್ಕಿದ್ದಂತೆ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು ಸಾಕಷ್ಟು ಕುತೂಹಲವಂತೂ ಮೂಡಿಸಿದೆ. ಜಮೀರ್ ಅವರೊಂದಿಗೆ ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಇದ್ದರು. ಗಮನಿಸಬೇಕಿರುವ ಒಂದು ಸಂಗತಿ ಏನೆಂದರೆ, ಇವರಿಬ್ಬರು ಕಾಂಗ್ರೆಸ್ ಪಕ್ಷ ಸೇರುವ ಮೊದಲು ಜೆಡಿ(ಎಸ್) ಪಕ್ಷದಲ್ಲಿದ್ದರು.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜಮೀರ್ ಕಾಂಗ್ರೆಸ್ ಪಕ್ಷದಲ್ಲಿ ಸಂತುಷ್ಟರಾಗಿಲ್ಲ. ತಮ್ಮನ್ನು ಕಡೆಗಣಿಸಲಾಗುತ್ತಿದೆ ಅಂತ ಆಪ್ತರಲ್ಲಿ ಅವರು ಹೇಳಿಕೊಂಡಿದ್ದಾರೆ. ಕೆಲ ವಾರಗಳ ಅವರು ಸಿದ್ದರಾಮಯ್ಯನವರೊಂದಿಗೆ ಮಾತಾಡುವಾಗ, ಸರ್ ಕೇವಲ ನಿಮ್ಮ ಕಾರಣದಿಂದಾಗಿ ಪಕ್ಷದಲ್ಲಿ ಉಳಿದಿರುವೆ ಅಂತ ಹೇಳಿದ್ದರಂತೆ.
ನಿಮಗೆ ನೆನಪಿರಬಹುದು, ಇತ್ತೀಚಿಗೆ ರಾಹುಲ್ ಗಾಂಧಿ ಬೆಂಗಳೂರಿಗೆ ಭೇಟಿ ನೀಡಿದಾಗ ಸಭೆಗೆ ಜಮೀರ ಅವರನ್ನು ಆಹ್ವಾನಿಸಲಿರಲಿಲ್ಲ. ಅದು ನಿಜಕ್ಕೂ ದೊಡ್ಡ ಪ್ರಮಾದ. ಜಮೀರ್ ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ನೀಡುವುದು ನಿಜವಾದರೂ ಮುಸ್ಲಿಂ ಸಮುದಾಯದ ಅತ್ಯಂತ ಪ್ರಭಾವಿ ನಾಯಕ, ಅದರಲ್ಲಿ ಅನುಮಾನ ಬೇಡ.
ಜಮೀರ್ ಕಳೆದೊಂದು ತಿಂಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿಲ್ಲ. ಮೊನ್ನೆ ಕಾಂಗ್ರೆಸ್ ತೊರೆದು ಜೆಡಿ(ಎಸ್) ಪಕ್ಷ ಸೇರಿದ ಸಿ ಎಮ್ ಇಬ್ರಾಹಿಂ ಅವರ ಹಾಗೆ ಜಮೀರ್ ಮನಸ್ಸಿನಲ್ಲಿ ಬೇರೇನಾದರೂ ಕುದಿಯುತ್ತಿದೆಯೇ?
ಇದನ್ನೂ ಓದಿ: ಸಮಾಜದ ಲೀಡರ್ ಆಗಿ ಜಮೀರ್ ಅಹ್ಮದ್ ಸಮಾಜಘಾತುಕ ಶಕ್ತಿಗಳಿಗೆ ನೆರವಾಗುತ್ತಿರುವುದು ಖಂಡನೀಯ: ಆರಗ ಜ್ಞಾನೇಂದ್ರ