ಛಾತ್ ಪೂಜೆ ವೇಳೆ ಯಮುನಾ ನದಿಯ ವಿಷಕಾರಿ ನೊರೆಯಲ್ಲೇ ಕೂದಲು ತೊಳೆದ ಮಹಿಳೆ; ವಿಡಿಯೋ ವೈರಲ್

|

Updated on: Nov 08, 2024 | 10:20 PM

ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಛಾತ್ ಪೂಜೆಗಾಗಿ ಯಮುನಾ ನದಿಯಲ್ಲಿ ಸ್ನಾನ ಮಾಡುವ ವೇಳೆ ಮಹಿಳೆಯರು ಯಮುನಾ ನದಿಯ ವಿಷಪೂರಿತ ನೊರೆಯಲ್ಲೇ ಸ್ನಾನ ಮಾಡಿದ್ದಾರೆ. ನದಿಯ ನೀರು ಈ ಪರಿ ಕಲುಷಿತವಾಗಿರುವುದನ್ನು ಕಂಡು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ವಿಷಕಾರಿ ನೊರೆಯಿಂದ ಆವೃತವಾದ ಯಮುನಾ ನದಿಯಲ್ಲಿ ಮಹಿಳೆಯೊಬ್ಬರು ಕೂದಲು ತೊಳೆಯುವ ವೈರಲ್ ವಿಡಿಯೋ ಇಂಟರ್ನೆಟ್ ಅನ್ನು ಬೆಚ್ಚಿಬೀಳಿಸಿದೆ. ಆರೋಗ್ಯದ ಎಚ್ಚರಿಕೆಯ ಹೊರತಾಗಿಯೂ, ಛಾತ್ ಪೂಜಾ ಭಕ್ತರು ಕಲುಷಿತ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ನದಿಯ ಬಿಳಿ ನೊರೆಯನ್ನು ಶಾಂಪೂ ಆಗಿ ಬಳಸಿದ್ದಾರೆ. ಮಾಲಿನ್ಯ ಮತ್ತು ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯದಿಂದ ಉಂಟಾದ ಈ ನೊರೆಯು ಗಂಭೀರ ಆರೋಗ್ಯ ಮತ್ತು ಪರಿಸರ ಅಪಾಯಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ