ವಿದ್ಯಾರ್ಥಿನಿಗೆ ಬುದ್ಧಿವಾದ ಹೇಳಿದ್ದಕ್ಕೆ ಕರ್ತವ್ಯನಿರತ ಕೆಎಸ್​​ಆರ್​ಟಿಸಿ ಬಸ್​​ ಕಂಡಕ್ಟರ್​​ ಮೇಲೆ ಹಲ್ಲೆ

Updated By: ಗಂಗಾಧರ​ ಬ. ಸಾಬೋಜಿ

Updated on: Oct 15, 2025 | 7:46 PM

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ-ಗೌರಿಬಿದನೂರು ಮಾರ್ಗದ KSRTC ಕಂಡಕ್ಟರ್ ಡಿ.ಎಂ. ಹರೀಶ್ ಮೇಲೆ ಹಲ್ಲೆ ನಡೆದಿದೆ. ವಿದ್ಯಾರ್ಥಿನಿಯ ಆಧಾರ್ ಕಾರ್ಡ್ ಸಮಸ್ಯೆ ಕುರಿತು ಬುದ್ಧಿವಾದ ಹೇಳಿದ್ದಕ್ಕೆ ಆಕೆಯ ಪೋಷಕರು ಚಲಿಸುವ ಬಸ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸೆರೆಯಾಗಿದೆ. ವಿಡಿಯೋ ನೋಡಿ.

ಚಿಕ್ಕಬಳ್ಳಾಪುರ, ಅಕ್ಟೋಬರ್​ 15: ಕರ್ತವ್ಯನಿರತ ಕೆಎಸ್​​ಆರ್​ಟಿಸಿ ಕಂಡಕ್ಟರ್​​ಗೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ಜಿಲ್ಲೆಯ ಗುಡಿಬಂಡೆ ಗೌರಿಬಿದನೂರು ಮಾರ್ಗದ ಬಸ್​​ನಲ್ಲಿ ನಡೆದಿದೆ. ವಿದ್ಯಾರ್ಥಿನಿ ಆಧಾರ್ ಕಾರ್ಡ್ ಫೋಟೋ ಮೇಲೆ ಇಂಕ್ ಬಿದ್ದಿತ್ತು. ಫೋಟೋ ಸ್ಪಷ್ಟವಾಗಿ ಕಾಣದ ಹಿನ್ನೆಲೆ ಮತ್ತೆ ಬರುವಾಗ ಬೇರೆ ಕಾರ್ಡ್ ತರುವಂತೆ ವಿದ್ಯಾರ್ಥಿನಿ ಆಧಾರ್ ಕಾರ್ಡ್ ಪ್ರಯಾಣಿಕರಿಗೆ ತೋರಿಸಿ ಕಂಡಕ್ಟರ್ ಬುದ್ಧಿವಾದ ಹೇಳಿದ್ದ. ಬಸ್​ನಲ್ಲಿ ನಡೆದ ಘಟನೆ ಬಗ್ಗೆ ಪೋಷಕರಿಗೆ ವಿದ್ಯಾರ್ಥಿನಿಗೆ ಮಾಹಿತಿ ನೀಡಿದ್ದು, ಹಲ್ಲೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Published on: Oct 15, 2025 07:40 PM