ರಾಜ್ಯದಲ್ಲಿ ಯಾರಿಗೂ ರಕ್ಷಣೆ ಇಲ್ಲ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆರೋಪ
ರಾಜ್ಯ ಸರ್ಕಾರದ ವಿರುದ್ಧ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಯಾದಗಿರಿಯಲ್ಲಿ ASI ಅವರನ್ನೇ ಅಪಹರಣ ಮಾಡಿದ್ದಾರೆ. ರಾಜ್ಯದಲ್ಲಿ ಪೊಲೀಸರಿಂದ ಜನರಿಗೆ ರಕ್ಷಣೆ ಇಲ್ಲ, ಪೊಲೀಸರಿಗೂ ರಕ್ಷಣೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ. ಶಾಸಕರಿಗೆ ಅನುದಾನ ತಾರತಮ್ಯ ವಿಚಾರವಾಗಿಯೂ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕೊಪ್ಪಳ, ಅಕ್ಟೋಬರ್ 15: ಯಾದಗಿರಿಯಲ್ಲಿ ASI ಅವರನ್ನೇ ಅಪಹರಣ ಮಾಡಿದ್ದಾರೆ. ರಾಜ್ಯದಲ್ಲಿ ಪೊಲೀಸರಿಂದ ಜನರಿಗೆ ರಕ್ಷಣೆ ಇಲ್ಲ, ಪೊಲೀಸರಿಗೂ ರಕ್ಷಣೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಕೊಪ್ಪಳದಲ್ಲಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಆರೋಪಿಸಿದ್ದಾರೆ. ಶಾಸಕರಿಗೆ ಅನುದಾನ ತಾರತಮ್ಯ ವಿಚಾರವಾಗಿಯೂ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಮುಖ್ಯಮಂತ್ರಿ ಆದವರು ಒಬ್ಬರಿಗೊಂದು ಒಬ್ಬರಿಗೊಂದು ಮಾಡಬಾರದು. ಈಗ ನಾನೇ ಸಾಕ್ಷಿ, ಗಂಗಾವತಿ ಕ್ಷೇತ್ರಕ್ಕೆ 25 ಕೋಟಿ ಕೊಟ್ಟಿದ್ದಾರೆ. ಪಕ್ಕದ ಕ್ಷೇತ್ರದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 15, 2025 06:07 PM
