ಚಿಕ್ಕಮಗಳೂರು: ಮೇವಿಗಾಗಿ ಕಾಡಿನಿಂದ ನಾಡಿಗೆ ಬಂದ ಕಾಡು ಕೋಣಗಳ ಹಿಂಡು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 12, 2024 | 3:50 PM

ಕಾಫಿನಾಡು ಚಿಕ್ಕಮಗಳೂರಿನ(Chikkamagaluru) ಮಲೆನಾಡು ಭಾಗದಲ್ಲಿ ಕಾಡು ಕೋಣಗಳ(bison) ಹಾವಳಿ ಹೆಚ್ಚಾಗಿದೆ. ಇಂದು(ಮೇ.12) ಕೂಡ ಮೇವಿಗಾಗಿ ಕಾಡು ಕೋಣಗಳ ಹಿಂಡು ಕಾಡಿನಿಂದ ನಾಡಿಗೆ ಬಂದಿದ್ದು,ಹಿಂಡು-ಹಿಂಡು ಕಾಡುಕೋಣಗಳಿಂದ ಕಾಫಿ ತೋಟಗಳು ನಾಶವಾಗಿದ್ದು, ಇತ್ತ ತೋಟಕ್ಕೆ ಹೋಗಲು ಕಾರ್ಮಿಕರು ಕೂಡ ಹಿಂದೇಟು ಹಾಕಿದ್ದಾರೆ.

ಚಿಕ್ಕಮಗಳೂರು, ಮೇ.12: ನಾಡಿನಾದ್ಯಂತ ಭೀಕರ ಬರಗಾಲ ಆವರಿಸಿದ್ದು, ಜನರು ಕಂಗಾಲಾಗಿದ್ದಾರೆ. ಈ ಮಧ್ಯೆ ಕಾಡು ಪ್ರಾಣಿಗಳು ಆಹಾರವನ್ನ ಅರಸಿ ನಾಡಿಗೆ ಲಗ್ಗೆ ಇಡುತ್ತಿದೆ. ಅದರಂತೆ ಕಾಫಿನಾಡು ಚಿಕ್ಕಮಗಳೂರಿನ(Chikkamagaluru) ಮಲೆನಾಡು ಭಾಗದಲ್ಲಿ ಕಾಡು ಕೋಣಗಳ(bison) ಹಾವಳಿ ಹೆಚ್ಚಾಗಿದೆ. ಇಂದು(ಮೇ.12) ಕೂಡ ಮೇವಿಗಾಗಿ ಕಾಡು ಕೋಣಗಳ ಹಿಂಡು ಕಾಡಿನಿಂದ ನಾಡಿಗೆ ಬಂದಿದ್ದು, ಕಳಸ ತಾಲೂಕಿನ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಗೊರಸುಡಿಗೆ, ತೋಟದೂರು ಗ್ರಾಮಗಳಲ್ಲಿ ಕಾಡುಕೋಣ ಉಪಟಳ ಮಿತಿಮೀರಿದೆ.

ತೋಟಕ್ಕೆ ಹೋಗಲು ಕಾರ್ಮಿಕರು ಹಿಂದೇಟು

ಹಿಂಡು-ಹಿಂಡು ಕಾಡುಕೋಣಗಳಿಂದ ಕಾಫಿ ತೋಟಗಳು ನಾಶವಾಗಿದ್ದು, ಇತ್ತ ತೋಟಕ್ಕೆ ಹೋಗಲು ಕಾರ್ಮಿಕರು ಕೂಡ ಹಿಂದೇಟು ಹಾಕಿದ್ದಾರೆ. ಇದರಿಂದ ಕಾರ್ಮಿಕರಿಲ್ಲದೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಇನ್ನು ಹಗಲಿರುಳೆನ್ನದೆ ತೋಟಗಳ ಬಳಿ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ. ಇನ್ನು ಇತ್ತೀಚೆಗೆ ಕಾಡಾನೆಗಳ ದಾಳಿಗೆ ನಲುಗಿದ್ದ ಜನ ಇದೀಗ ಕಾಡುಕೋಣಗಳ ಹಾವಳಿಗೆ ಕಂಗಾಲಾಗಿದ್ದಾರೆ. ಇತ್ತ ಕಾಫಿ, ಅಡಿಕೆ, ಬಾಳೆ ಬೆಳೆಗಳು ಸಂಪೂರ್ಣ ಹಾನಿಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Sun, 12 May 24

Follow us on