ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದ ಅವಾಂತರ: ಬೆಡ್ ರೂಮ್​ಗೆ ನುಗ್ಗಿದ ನೀರು

ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದ ಅವಾಂತರ: ಬೆಡ್ ರೂಮ್​ಗೆ ನುಗ್ಗಿದ ನೀರು

Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: May 12, 2024 | 10:38 PM

ಬೆಳಗಾವಿ ತಾಲೂಕಿನ ಮಜಗಾಂವ್ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆ ಹಿನ್ನೆಲೆ ಮನೆಯ ಬೆಡ್ ರೂಮ್​​ಗೂ ನೀರು ನುಗ್ಗಿದ್ದು ಹಾಸಿಗೆ ನೀರು ಪಾಲಾಗಿವೆ. ಮನೆಗಳಿಗೆ ನುಗ್ಗಿದ ನೀರು ಹೊರಹಾಕಲು ನಿವಾಸಿಗಳು ಪರದಾಡಿದ್ದಾರೆ.

ಬೆಳಗಾವಿ, ಮೇ 12: ನಗರದಲ್ಲಿ ಎರಡನೇ ದಿನವೂ‌ ಒಂದು ಗಂಟೆಗೂ ಹೆಚ್ಚು ಕಾಲ ಮಳೆ (Rain) ಸುರಿದಿದ್ದು, ಮಳೆಯಿಂದ ಅವಾಂತರ ಸಂಭವಿಸಿವೆ. ಬೆಳಗಾವಿ (Belagavi) ತಾಲೂಕಿನ ಮಜಗಾಂವ್ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆ ಹಿನ್ನೆಲೆ ಮನೆಯ ಬೆಡ್ ರೂಮ್​​ಗೂ ನೀರು ನುಗ್ಗಿದ್ದು ಹಾಸಿಗೆ ನೀರು ಪಾಲಾಗಿವೆ. ಮನೆಗಳಿಗೆ ನುಗ್ಗಿದ ನೀರು ಹೊರಹಾಕಲು ನಿವಾಸಿಗಳು ಪರದಾಡಿದ್ದಾರೆ. ಮಾರುಕಟ್ಟೆ ಪ್ರದೇಶಕ್ಕೂ ನೀರು ನುಗ್ಗಿದ್ದು ಟೊಮ್ಯಾಟೋ ರಸ್ತೆಯಲ್ಲಿ ತೇಲಿ ಹೋಗಿವೆ. ಒಟ್ಟಾರೆ ಮಳೆ ಅವಾಂರದಿಂದ ಜಿಲ್ಲಾಧಿಕಾರಿ, ಶಾಸಕ ಅಭಯ್ ಪಾಟೀಲ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.