Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ ಹಾವಳಿ, ಬೇಲೂರು ಬಳಿಯ ಗ್ರಾಮವೊಂದಕ್ಕೆ ಒಂಟಿಸಲಗ ಪ್ರವೇಶ, ಆತಂಕದಲ್ಲಿ ಗ್ರಾಮಸ್ಥರು

ಹಾಸನ ಜಿಲ್ಲೆಯಲ್ಲಿ ನಿಲ್ಲದ ಕಾಡಾನೆ ಹಾವಳಿ, ಬೇಲೂರು ಬಳಿಯ ಗ್ರಾಮವೊಂದಕ್ಕೆ ಒಂಟಿಸಲಗ ಪ್ರವೇಶ, ಆತಂಕದಲ್ಲಿ ಗ್ರಾಮಸ್ಥರು

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 19, 2024 | 11:47 AM

ಗ್ರಾಮವೊಂದಕ್ಕೆ ಅನೆಗಳು ನುಗ್ಗಿದಾಗ ಅರಣ್ಯ ಇಲಾಖೆಯ ಸಿಬ್ಬಂದಿ ಅವುಗಳನ್ನು ವಾಪಸ್ಸು ಕಾಡಿಗಟ್ಟುವ ಕೆಲಸ ಮಾಡುತ್ತದೆ. ಅದರೆ, ಕೆಲ ದಿನಗಳ ಬಳಿಕ ಕಾಡಾನೆಗಳು ಪುನಃ ಊರಿನ ದಾರಿ ಹಿಡಿಯುತ್ತವೆ. ದಶಕಗಳಿಂದ ಇದೇ ಪ್ರಕ್ರಿಯೆ ನಡೆಯುತ್ತಿದೆ. ಕಣಗುಪ್ಪೆ ಗ್ರಾಮದಲ್ಲಿ ಇಂದು ಬೆಳಗ್ಗೆ ಒಂಟಿ ಸಲಗ ನಡೆದುಹೋದ ಘಟನೆ ಸಾಮಾನ್ಯವಾದುದಲ್ಲ, ಗ್ರಾಮಸ್ಥರು ಯಾವ ಪರಿ ಹೆದರಿರುತ್ತಾರೆ ಅಂತ ಊಹಿಸಬಹುದು.

ಹಾಸನ: ಕಾಡಲ್ಲೂ ನಾನೇ ರಾಜ ನಿಮ್ಮೂರಲ್ಲೂ ನಾನೇ ಕಿಂಗ್ ಮಾರಾಯ ಅನ್ನುವಂತಿದೆ ಈ ಒಂಟಿಸಲಗದ (wild tusker) ಗತ್ತು. ಅದು ರಸ್ತೆಯಲ್ಲಿ ನಡೆದು ಹೋಗುತ್ತಿರುವ ಠೀವಿ ನೋಡಿ, ನಡಿಗೆಯಲ್ಲಿ ಗಜ ಗಾಂಭೀರ್ಯ ಅಂತ ನಾವ್ ಹೇಳ್ತೀವಲ್ಲ, ಯಾಕೆ ಅನ್ನೋದು ದೃಶ್ಯಗಳನ್ನು ನೋಡುತ್ತಿದ್ದರೆ ಗೊತ್ತಾಗುತ್ತದೆ. ಜೋಕ್ಸ್ ಅಪಾರ್ಟ್, ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ (Belur) ಕಣಗುಪ್ಪೆ ಗ್ರಾಮಕ್ಕೆ ಕಾಡಾನೆಯೊಂದು ಪ್ರವೇಶಿಸಿ ಗ್ರಾಮದ ನಿವಾಸಿಗಳನ್ನು (residents) ಆತಂಕಕ್ಕೆ ದೂಡಿದೆ. ಬೇಲೂರು ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದೆ ಆದರೆ ಸರ್ಕಾರ ಅದರಲ್ಲೂ ನಿರ್ದಿಷ್ಟವಾಗಿ ಅರಣ್ಯ ಇಲಾಖೆಯಿಂದ ಇದನ್ನು ತಡೆಯಲು ಒಂದು ಕಾಂಕ್ರೀಟ್ ಯೋಜನೆ ರೂಪುಗೊಂಡಿಲ್ಲ. ಗ್ರಾಮವೊಂದಕ್ಕೆ ಅನೆಗಳು ನುಗ್ಗಿದಾಗ ಅರಣ್ಯ ಇಲಾಖೆಯ ಸಿಬ್ಬಂದಿ ಅವುಗಳನ್ನು ವಾಪಸ್ಸು ಕಾಡಿಗಟ್ಟುವ ಕೆಲಸ ಮಾಡುತ್ತದೆ. ಅದರೆ, ಕೆಲ ದಿನಗಳ ಬಳಿಕ ಕಾಡಾನೆಗಳು ಪುನಃ ಊರಿನ ದಾರಿ ಹಿಡಿಯುತ್ತವೆ. ದಶಕಗಳಿಂದ ಇದೇ ಪ್ರಕ್ರಿಯೆ ನಡೆಯುತ್ತಿದೆ. ಕಣಗುಪ್ಪೆ ಗ್ರಾಮದಲ್ಲಿ ಇಂದು ಬೆಳಗ್ಗೆ ಒಂಟಿ ಸಲಗ ನಡೆದುಹೋದ ಘಟನೆ ಸಾಮಾನ್ಯವಾದುದಲ್ಲ, ಗ್ರಾಮಸ್ಥರು ಯಾವ ಪರಿ ಹೆದರಿರುತ್ತಾರೆ ಅಂತ ಊಹಿಸಬಹುದು. ಈ ಆನೆ ಗ್ರಾಮದಲ್ಲಿರುವ ಕಾಫಿತೋಟವೊಂದರ ಕಡೆ ಹೋಯಿತಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ