ದಾಳಿಗೆ ಮುಂದಾದ ಕಾಡಾನೆ: ಪ್ರವಾಸಿಗರು ಜಸ್ಟ್ ಮಿಸ್!

Edited By:

Updated on: Nov 28, 2025 | 7:21 PM

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಸಮೀಪದ ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರ ಜೀಪ್ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ನಡೆದಿದೆ. ಪ್ರವಾಸಿಗರು ಜೀಪ್‌ನಲ್ಲಿ ಸಫಾರಿ ಹೊರಟಿದ್ದ ವೇಳೆ ಒಂಟಿ ಸಲಗದ ಬೆನ್ನಟ್ಟಿದೆ. ಜೀಪ್ ಚಾಲಕನ ಸಮಯಪ್ರಜ್ಞೆಯಿಂದ ಪ್ರವಾಸಿಗರ ಜೀವ ಉಳಿದಿದೆ. ವಿಡಿಯೋ ನೋಡಿ.

ಚಿಕ್ಕಮಗಳೂರು, ನವೆಂಬರ್​ 28: ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆ ಬಳಿ ಪ್ರವಾಸಿಗರ ಜೀಪ್ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ನಡೆದಿದೆ. ಜಂಗಲ್‌ ಲಾಡ್ಜ್​​ನವರಿಗೆ ಸೇರಿದ ಜೀಪ್​​ನಲ್ಲಿ ಪ್ರವಾಸಿಗರು ಸಫಾರಿ ಹೊರಟಿದ್ದರು. ಈ ವೇಳೆ ಭದ್ರಾ ಬಲದಂಡೆ ನಾಲೆ ಬಳಿಯ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಏಕಾಏಕಿ ಕಾಡಾನೆ ಜೀಪ್ ಅಟ್ಟಿಸಿಕೊಂಡು ಬಂದಿದೆ.​​ ಚಾಲಕನ ಸಮಯ ಪ್ರಜ್ಞೆಯಿಂದ ಕಾಡಾನೆ ದಾಳಿಯಿಂದ ಪ್ರವಾಸಿಗರು ಜಸ್ಟ್ ಮಿಸ್ ‌ಆಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 28, 2025 06:49 PM
Follow Us
Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More