AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿರಾಯನ ಖಡಕ್ ಲುಕ್​​​ಗೆ ಪ್ರವಾಸಿಗರು ಫಿದಾ: ತಣಿಗೆಬೈಲ್ ಅರಣ್ಯದಲ್ಲಿ ವ್ಯಾಘ್ರನ 'ಫೋಟೋ ಶೂಟ್'!

ಹುಲಿರಾಯನ ಖಡಕ್ ಲುಕ್​​​ಗೆ ಪ್ರವಾಸಿಗರು ಫಿದಾ: ತಣಿಗೆಬೈಲ್ ಅರಣ್ಯದಲ್ಲಿ ವ್ಯಾಘ್ರನ ‘ಫೋಟೋ ಶೂಟ್’!

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Apr 16, 2026 | 11:30 AM

Share

ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಅರಣ್ಯದಲ್ಲಿ ಪ್ರವಾಸಿಗರಿಗೆ ಅದೃಷ್ಟವಶಾತ್ ರಾಜಗಾಂಭೀರ್ಯದ ಹುಲಿ ದರ್ಶನವಾಗಿದೆ. ತಣಿಗೆಬೈಲ್ ವಲಯದಲ್ಲಿ ರಸ್ತೆಯ ಬದಿಯಲ್ಲೇ ಕುಳಿತಿದ್ದ ವ್ಯಾಘ್ರವನ್ನು ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಹುಲಿಗಳ ಸಂಚಾರವಿರುವುದರಿಂದ, ಅರಣ್ಯ ಇಲಾಖೆ ಪ್ರವಾಸಿಗರು ವಾಹನಗಳಿಂದ ಇಳಿಯಬಾರದು ಮತ್ತು ಕಾಡುಪ್ರಾಣಿಗಳಿಗೆ ತೊಂದರೆ ನೀಡಬಾರದು ಎಂದು ಎಚ್ಚರಿಕೆ ನೀಡಿದೆ.

ಚಿಕ್ಕಮಗಳೂರು, ಏ.16: ಕಾಫಿನಾಡು ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೆಮ್ಮಣ್ಣುಗುಂಡಿ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಅದೃಷ್ಟವಶಾತ್ ವ್ಯಾಘ್ರ ದರ್ಶನವಾಗಿದೆ. ಅಭಯಾರಣ್ಯದ ಅಂಚಿನ ರಸ್ತೆಯಲ್ಲೇ ಹುಲಿಯೊಂದು ರಾಜಗಾಂಭೀರ್ಯದಿಂದ ಕುಳಿತಿದ್ದ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ತಣಿಗೆಬೈಲ್ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರು ವಾಹನದಲ್ಲಿ ತೆರಳುತ್ತಿದ್ದಾಗ ಅರಣ್ಯದ ಅಂಚಿನಲ್ಲಿ ಹುಲಿಯೊಂದು ಯಾವುದೇ ಅಂಜಿಕೆಯಿಲ್ಲದೆ ಆರಾಮವಾಗಿ ಕುಳಿತಿರುವುದು ಕಂಡುಬಂದಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ಪ್ರವಾಸಿಗರಿಗೂ ಹುಲಿ ದಿಟ್ಟವಾಗಿ ‘ಲುಕ್’ ಕೊಟ್ಟಿದೆ. ಅರಣ್ಯದಲ್ಲಿ ಸಫಾರಿ ಹೋದರೂ ಕಾಣದ ವ್ಯಾಘ್ರ, ಇಂದು ರಸ್ತೆ ಬದಿಯಲ್ಲೇ ಕಾಣಿಸಿಕೊಂಡಿದ್ದರಿಂದ ಪ್ರವಾಸಿಗರು ಪುಳಕಿತರಾಗಿದ್ದಾರೆ. ಹುಲಿಯು ಕೆಲಕಾಲ ಅಲ್ಲೇ ಕುಳಿತು, ನಂತರ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ. ಈ ಭಾಗದಲ್ಲಿ ಹುಲಿಗಳ ಸಂಚಾರವಿರುವುದು ದೃಢಪಟ್ಟಿದ್ದು, ಕೆಮ್ಮಣ್ಣುಗುಂಡಿ ಮತ್ತು ತಣಿಗೆಬೈಲ್ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ವಾಹನಗಳಿಂದ ಕೆಳಗಿಳಿಯಬಾರದು ಮತ್ತು ಕಾಡುಪ್ರಾಣಿಗಳಿಗೆ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us