‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ನೇರವಾಗಿ ಕಾರಣ ತಿಳಿಸಿದ ಚಿಕ್ಕಣ್ಣ

Updated on: Aug 25, 2026 | 6:33 PM

ಪಾವನಾ ಜೊತೆ ಚಿಕ್ಕಣ್ಣ ಅವರು ಹಸೆಮಣೆ ಏರಲಿದ್ದಾರೆ. ಚಿತ್ರರಂಗದ ಬಹುತೇಕರಿಗೆ ಈಗಾಗಲೇ ಅವರು ಆಮಂತ್ರಣ ಪತ್ರಿಕೆ ನೀಡಿದ್ದಾರೆ. ನಟ ದರ್ಶನ್ ಅವರ ಆಪ್ತ ಬಳಗದಲ್ಲಿ ಚಿಕ್ಕಣ್ಣ ಗುರುತಿಸಿಕೊಂಡಿದ್ದರು. ಆದರೆ ಈಗ ದರ್ಶನ್ ಅವರಿಗೆ ಚಿಕ್ಕಣ್ಣ ಮದುವೆ ಆಹ್ವಾನ ನೀಡುತ್ತಿಲ್ಲ. ಆ ಬಗ್ಗೆ ಅವರು ಮಾತನಾಡಿದ್ದಾರೆ.

ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 29 ಮತ್ತು 30ರಂದು ಅವರ ಮದುವೆ ನಡೆಯಲಿದೆ. ಪಾವನಾ ಜೊತೆ ಚಿಕ್ಕಣ್ಣ ಅವರು ಹಸೆಮಣೆ ಏರಲಿದ್ದಾರೆ. ಚಿತ್ರರಂಗದ ಬಹುತೇಕರಿಗೆ ಅವರು ಈಗಾಗಲೇ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ನಟ ದರ್ಶನ್ (Darshan) ಅವರ ಆಪ್ತ ಬಳಗದಲ್ಲಿ ಚಿಕ್ಕಣ್ಣ ಗುರುತಿಸಿಕೊಂಡಿದ್ದರು. ಆದರೆ ಈಗ ದರ್ಶನ್​ಗೆ ಚಿಕ್ಕಣ್ಣ ಅವರು ಮದುವೆಯ ಆಹ್ವಾನ ನೀಡುತ್ತಿಲ್ಲ. ಆ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ದರ್ಶನ್ ಅವರ ಪ್ರಕರಣದಲ್ಲಿ ನಾನು ಕೂಡ ಸಾಕ್ಷಿ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ನಾನು ಅವರನ್ನು ಮದುವೆಗೆ ಕರೆಯೋಕೆ ಆಗಲ್ಲ. ಒಂದು ವೇಳೆ ಅವರು ಜೈಲಿನಿಂದ ಹೊರಗೆ ಇದ್ದರೂ ಕೂಡ ಮದುವೆಗೆ ಬರಲು ಆಗುತ್ತಿರಲಿಲ್ಲ. ಯಾಕೆಂದರೆ, ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿಕೊಂಡೇ ಭೇಟಿ ಮಾಡಬೇಕು. ನಾನೊಬ್ಬ ಸಾಕ್ಷಿ ಆಗಿರುವುದರಿಂದ ಅವರ ಬಗ್ಗೆ ಇಷ್ಟೇ ಮಾತಾಡೋಕೆ ಆಗೋದು’ ಎಂದು ಚಿಕ್ಕಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More