ಮೊದಲ ಬಾರಿ ನಾಯಕ, ಚಿಕ್ಕಣ್ಣ ಧನ್ಯವಾದ ಹೇಳಿದ್ದು ಇವರಿಗೆ

Updated on: Jan 13, 2024 | 10:27 PM

Chikkanna: ಹಲವು ವರ್ಷಗಳಿಂದ ಹಾಸ್ಯ ನಟರಾಗಿದ್ದ ಚಿಕ್ಕಣ್ಣ ‘ಉಪಾಧ್ಯಕ್ಷ’ ಸಿನಿಮಾ ಮೂಲಕ ನಾಯಕ ನಟರಾಗಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ....

ಕನ್ನಡ ಚಿತ್ರರಂಗದ (Sandalwood) ಜನಪ್ರಿಯ ಹಾಸ್ಯನಟರಲ್ಲಿ ಒಬ್ಬರಾದ ಚಿಕ್ಕಣ್ಣ ಇದೀಗ ಹಾಸ್ಯನಟನಿಂದ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ. ಅವರ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಅನ್ನು ಶಿವರಾಜ್ ಕುಮಾರ್ ಹಾಗೂ ಇನ್ನೂ ಕೆಲವು ಅತಿಥಿಗಳು ಬಿಡುಗಡೆ ಮಾಡಿದರು. ಮೊದಲ ಬಾರಿಗೆ ಹೀರೋ ಆದ ಖುಷಿಯಲ್ಲಿ ಮಾತನಾಡಿದ ನಟ ಚಿಕ್ಕಣ್ಣ ಹಲವು ನಟರಿಗೆ ಧನ್ಯವಾದ ಹೇಳಿದರು. ನಾಯಕ ನಟನಾದ ಅನುಭವ ಹಂಚಿಕೊಂಡರು. ತಮ್ಮ ‘ಉಪಾಧ್ಯಕ್ಷ’ ಸಿನಿಮಾವನ್ನು ಏಕೆ ನೋಡಬೇಕೆಂದು ಕಾರಣ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More