ಲೂಟಿಕೋರ ರವಿ ಮನೆಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮೊದಲು ದಾಳಿ ನಡೆಸಲಿ: ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 17, 2022 | 11:47 AM

ಸಿಟಿ ರವಿ ಒಬ್ಬ ಲೂಟಿಕೋರನಾಗಿದ್ದು ಮೊದಲು ಅವರ ಮನೆಯ ಮೇಲೆ ಐಟಿ ದಾಳಿ ನಡೆಯಲಿ ಎಂದು ಅವರು ಘೋಷಣೆಗಳನ್ನು ಕೂಗಿದರು.

ಚಿಕ್ಕಮಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಪ್ರಧಾನ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ನಾಯಕಿಯಾಗಿರುವ ಎವಿ ಗಾಯತ್ರಿ ಶಾಂತೇಗೌಡ (AV Gayathri Shanthegowda) ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿರುವುದು ಸ್ಥಳೀಯ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ. ಬಿಜೆಪಿ ನಾಯಕ ಸಿಟಿ ರವಿ ಅವರೇ ಐಟಿ ದಾಳಿಯ ರೂವಾರಿಯಾಗಿದ್ದು ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಸಿಟಿ ರವಿ ಒಬ್ಬ ಲೂಟಿಕೋರನಾಗಿದ್ದು ಮೊದಲು ಅವರ ಮನೆಯ ಮೇಲೆ ಐಟಿ ದಾಳಿ ನಡೆಯಲಿ ಎಂದು ಅವರು ಘೋಷಣೆಗಳನ್ನು ಕೂಗಿದರು.