ನಂದಿಬೆಟ್ಟದ ಮೇಲಿನ ವಾತಾವರಣ, ಮಂಜು ಮತ್ತು ಕುಳಿರ್ಗಾಳಿ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವುದು ನಿಸ್ಸಂಶಯ!
ಬೆಟ್ಟದ ಮೇಲಿನ ವಾತಾವರಣ ಆಹ್ಲಾದಕ ಮತ್ತು ರೊಮ್ಯಾಂಟಿಕ್ ಅಗಿದೆ. ಪ್ರೇಮಿಗಳಿಗೆ ಮತ್ತು ನವವಿವಾಹಿತರಿಗೆ ಇದು ಬಹಳ ಮುದ ನೀಡುವ ಪ್ರದೇಶವಾಗಿದೆ. ಹಾಗಂತ ಬೇರೆಯವರು ಇಲ್ಲಿಗೆ ಹೋಗಬಾರದು ಅಂತೇನಿಲ್ಲ.
ಪ್ರವಾಸ, ಪಿಕ್ನಿಕ್ ಮತ್ತು ಸಾಹಸ (ಚಾರಣ) ಮೊದಲಾದವುಗಳನ್ನು ಇಷ್ಟಪಡುವ ಜನರಿಗೊಂದು ಸಂತಸ ಸುದ್ದಿ. ಮೂರು ತಿಂಗಳ ನಂತರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಂದಿಬೆಟ್ಟವನ್ನು ಸಾರ್ವಜನಿಕರ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ನಿಮಗೆ ಗೊತ್ತಿದೆ, ನಂದಿ ಬೆಟ್ಟ ಕರ್ನಾಟಕದ ಸುಂದರ ಮತ್ತು ಅತಿ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಕೊವಿಡ್-19 ಪ್ರಕರಣಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಜನ ಇಲ್ಲಿಗೆ ಭೇಟಿ ನೀಡಲು ಮುಕ್ತರಾದರೂ ಕೊವಿಡ್ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೊಳಿಸಿರುವ ನಿಯಮಾವಳಿ ಮತ್ತು ಮಾರ್ಗಸೂಚಿಗಳಿಗೆ ಬದ್ಧರಾಗಿರಲೇಬೇಕು.
ಓಕೆ, ಹೇಗಿದೆ ನೋಡಿ ಬೆಟ್ಟದ ಮೇಲಿನ ವಾತಾವರಣ? ನಂದಿಬೆಟ್ಟದ ಮೇಲೆ ನಿಂತು ಸೂರ್ಯೋದಯವಾಗುವುದನ್ನು ನೋಡುವುದೇ ಒಂದು ಸುಂದರ, ಆಹ್ಲಾದಕರ ಮತ್ತು ಮನಸ್ಸಿಗೆ ಮುದ ನೀಡುವ ಅನುಭವ. ಅ ಸೊಬಗನ್ನು ಸವಿಯಲು ಕೆಲ ಜನ ನಸುಕಿನ ಹೊತ್ತಲ್ಲೇ ಬೆಟ್ಟಕ್ಕೆ ಬಂದು ಬಿಟ್ಟಿದ್ದಾರೆ. ಆದರೆ ಅವರದ್ದು ದುರಾದೃಷ್ಟ. ಮೋಡ ಕವಿದ ವಾತಾವರಣ ಮತ್ತು ಬೆಟ್ಟದ ಪ್ರದೇಶವೆಲ್ಲ ಮಂಜಿನಿಂದ ಅವರಿಸಿದ್ದರಿಂದ ಸನ್ ರೈಸ್ ವೀಕ್ಷಿಸುವುದು ಸಾಧ್ಯವಾಗಿಲ್ಲ.
ಚಿಕ್ಕಬಳ್ಳಾಪುರದ ಟಿವಿ9 ವರದಿಗಾರ ಭೀಮಪ್ಪ ಪಾಟೀಲ್ ಬೆಳಗಿನ ಜಾವವೇ ಅಲ್ಲಿಗೆ ತೆರಳಿ ಈ ವರದಿಯನ್ನು ಕಳಿಸಿದ್ದಾರೆ.
ಬೆಟ್ಟದ ಮೇಲಿನ ವಾತಾವರಣ ಆಹ್ಲಾದಕ ಮತ್ತು ರೊಮ್ಯಾಂಟಿಕ್ ಅಗಿದೆ. ಪ್ರೇಮಿಗಳಿಗೆ ಮತ್ತು ನವವಿವಾಹಿತರಿಗೆ ಇದು ಬಹಳ ಮುದ ನೀಡುವ ಪ್ರದೇಶವಾಗಿದೆ. ಹಾಗಂತ ಬೇರೆಯವರು ಇಲ್ಲಿಗೆ ಹೋಗಬಾರದು ಅಂತೇನಿಲ್ಲ. ಬೆಟ್ಟದ ಮೇಲೆ ಬೀಸುತ್ತಿರುವ ಕುಳಿರ್ಗಾಳಿ ಅರಸಿಕನಲ್ಲೂ ರೊಮ್ಯಾಂಟಿಕ್ ಭಾವ ಹುಟ್ಟುವಂತೆ ಮಾಡುತ್ತದೆ.
ನಮ್ಮ ವರದಿಗಾರರು ತಿಳಿಸಿದ ಹಾಗೆ ಬೆಟ್ಟದ ತುದಿ ಅಂದರೆ ಜನ ಓಡಾಡುತ್ತಿರುವ ಈ ಪ್ರದೇಶ ಭೂಮಿಯಿಂದ ಸುಮಾರು 4,000 ಅಡಿಗಳಷ್ಟು ಮೇಲಿದೆ. ನಾವು ವಿವರಣೆ ನೀಡುವುದು ಇದ್ದೇ ಇರುತ್ತೆ, ನೀವೊಮ್ಮೆ ಬೆಳಗ್ಗೆ 4 ಗಂಟೆಗೆ ಅಲ್ಲಿಗೆ ಹೊರಟು ಇದನ್ನೆಲ್ಲ ಅನುಭವಿಸಿ ಬನ್ನಿ ಮಾರಾಯ್ರೇ.
ಇದನ್ನೂ ಓದಿ: TikTok: ಪ್ಲಾಸ್ಟಿಕ್ ಸರ್ಜರಿ ಮಾಡುವುದನ್ನು ಬಿಟ್ಟು ಟಿಕ್ಟಾಕ್ ವಿಡಿಯೋ ಮಾಡಿದ ಡಾಕ್ಟರ್; ಆಮೇಲೇನಾಯ್ತು?