ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಸಾಂತ್ವನ ಹೇಳಿದ ಟಾಲಿವುಡ್ ನಟ ಅಲ್ಲು ಸಿರೀಶ್
ಲುಗು ನಟ, ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅವರು ಇಂದು (ಡಿಸೆಂಬರ್ 1) ಬೆಂಗಳೂರಿಗೆ ಆಗಮಿಸಿದ್ದರು. ಸದಾಶಿವನಗರದ ಪುನೀತ್ ಮನೆಗೆ ಅಲ್ಲು ಸಿರೀಶ್ ತೆರಳಿದ್ದಾರೆ.
ಸ್ಯಾಂಡಲ್ವುಡ್ ಖ್ಯಾತ ನಟ ಪುನೀತ್ ರಾಜ್ಕುಮಾರ್ ನಿಧನ ಹೊಂದಿರುವ ವಿಚಾರ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಶಾಕ್ ನೀಡಿದೆ. ಪುನೀತ್ ನಿಧನ ಹೊಂದಿ ತಿಂಗಳೇ ಕಳೆದರೂ ಕುಟುಂಬದ ದುಃಖ ಕಡಿಮೆ ಆಗಿಲ್ಲ. ಅವರ ಕುಟುಂಬಕ್ಕೆ ಸಾಂತ್ವನ ಹೇಳೋಕೆ ಬೇರೆ ಚಿತ್ರರಂಗದ ಅನೇಕ ಸ್ಟಾರ್ಗಳು ಆಗಮಿಸುತ್ತಿದ್ದಾರೆ. ತೆಲುಗು ನಟ, ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅವರು ಇಂದು (ಡಿಸೆಂಬರ್ 1) ಬೆಂಗಳೂರಿಗೆ ಆಗಮಿಸಿದ್ದರು. ಸದಾಶಿವನಗರದ ಪುನೀತ್ ಮನೆಗೆ ಅಲ್ಲು ಸಿರೀಶ್ ತೆರಳಿದ್ದಾರೆ. ಪುನೀತ್ ಕುಟುಂಬಸ್ಥರಿಗೆ ಅವರು ಸಾಂತ್ವನ ಹೇಳಿದ್ದಾರೆ. ಈ ಮೊದಲು ನಟ ಸೂರ್ಯ, ರಾಮ್ ಚರಣ್ ಸೇರಿ ಪರಭಾಷೆಯ ಅನೇಕ ಸ್ಟಾರ್ ನಟರು ಬೆಂಗಳೂರಿಗೆ ಆಗಮಿಸಿ ಪುನೀತ್ ಕುಟುಂಬವನ್ನು ಭೇಟಿ ಮಾಡಿ ತೆರಳಿದ್ದಾರೆ. ಅಕ್ಟೋಬರ್ 29ರಂದು ಪುನೀತ್ ನಿಧನ ಹೊಂದಿದ್ದರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್-ಅಶ್ವಿನಿ ವಿವಾಹ ವಾರ್ಷಿಕೋತ್ಸವ; ಅಪ್ಪು ಇಲ್ಲದೆ ಮಂಕಾಗಿದೆ ಈ ದಿನ
Latest Videos