ಸಮಾನತೆಯ ಮೂರ್ತಿ ಸಮರ್ಪಣೆಗೆ ಸಿದ್ಧ; ರಾಮಾನುಜಾಚಾರ್ಯರ ಪ್ರತಿಮೆಯ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ

ಸಮಾನತೆಯ ಮೂರ್ತಿ ಸಮರ್ಪಣೆಗೆ ಸಿದ್ಧ; ರಾಮಾನುಜಾಚಾರ್ಯರ ಪ್ರತಿಮೆಯ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ

TV9 Web
| Updated By: shivaprasad.hs

Updated on:Feb 01, 2022 | 8:17 AM

Sri Tridandi Chinna Jeeyar Swamy: ಸಂತ ಶ್ರೀ ರಾಮಾನುಜಾಚಾರ್ಯರ ಹುಟ್ಟಿ 1000 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಸಮೀಪ ಅವರ ಪ್ರತಿಮೆ ನಿರ್ಮಿಸಲಾಗುತ್ತಿದ್ದು, ಅದಕ್ಕೆ ‘ಸಮಾನತೆಯ ಪ್ರತಿಮೆ’ ಎಂದು ಕರೆಯಲಾಗಿದೆ. ಈ ಕುರಿತು ಚಿನ್ನ ಜೀಯರ್ ಸ್ವಾಮಿ ಮಾತನಾಡಿದ್ದಾರೆ.

ಹೈದರಾಬಾದ್: ಸಮಾನತೆಯನ್ನು ಸಾರಿದ ವೈಷ್ಣವ ಸಂತ ರಾಮಾನುಜಾಚಾರ್ಯ ಸ್ವಾಮಿಗಳು ಹುಟ್ಟಿ 1000 ವರ್ಷಗಳು ಸಂದಿವೆ . ಅವರ ನೆನಪಿಗಾಗಿ, ಹೈದರಾಬಾದಿನ ಸಮೀಪವಿರುವ ಶಂಶಾಬಾದ್‌ನಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದೆ. ಸುಮಾರು 1000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಇದು ನಿರ್ಮಾಣವಾಗುತ್ತಿದೆ. ರಾಮಾನುಜಾಚಾರ್ಯರ ಪ್ರತಿಮೆಗೆ ‘ಸಮಾನತೆಯ ಮೂರ್ತಿ‘ (Statue of Equality) ಎಂದೂ ಕರೆಯಲಾಗುತ್ತಿದೆ. ಇದು ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ. ಸುಮಾರು 216 ಅಡಿ ಉದ್ದವಿರುವ ಈ ಪ್ರತಿಮೆಯ ನಿರ್ಮಾಣಕ್ಕೆ 1800 ಟನ್‌ಗಳಿಗಿಂತ ಹೆಚ್ಚು ಪಂಚ ಲೋಹಗಳನ್ನು ಬಳಸಲಾಗಿದೆ. ದೇವಾಲಯದ ಕುರಿತು ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಅವರು ಟಿವಿ9 ಭಾರತವರ್ಷದೊಂದಿಗೆ ವಿಶೇಷ ಸಂವಾದದಲ್ಲಿ ವಿವರವಾಗಿ ಮಾತನಾಡಿದ್ದಾರೆ.

ಒಟ್ಟಾರೆ 200 ಎಕರೆಯಷ್ಟು ವಿಶಾಲ ವಿಸ್ತಾರದಲ್ಲಿ ದೇವಾಲಯ ಹರಡಿಕೊಂಡಿದೆ. ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆಯನ್ನು ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ:

Hindu Ekta Mahakumbh ಜಾತಿ ಮತ್ತು ಕುಲವನ್ನು ಮೀರಿ ದೇಶದ ಪ್ರತಿಯೊಂದು ಕಣವನ್ನು ಒಗ್ಗೂಡಿಸುವುದು ಮುಖ್ಯ: ಶ್ರೀ ಚಿನ್ನ ಜೀಯರ್ ಸ್ವಾಮಿಗಳು

ಸಮಾನತೆಯ ಮೂರ್ತಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ ಚಿನ್ನ ಜೀಯರ್ ಸ್ವಾಮೀಜಿ

Published on: Feb 01, 2022 08:16 AM