Hindu Ekta Mahakumbh ಜಾತಿ ಮತ್ತು ಕುಲವನ್ನು ಮೀರಿ ದೇಶದ ಪ್ರತಿಯೊಂದು ಕಣವನ್ನು ಒಗ್ಗೂಡಿಸುವುದು ಮುಖ್ಯ: ಶ್ರೀ ಚಿನ್ನ ಜೀಯರ್ ಸ್ವಾಮಿಗಳು

ಇಲ್ಲಿಯ ಪ್ರತಿ ಕಣ ಕಣವೂ, ಇಲ್ಲಿಯದ್ದು ಮಾತ್ರವಲ್ಲ ಇಡೀ ಭಾರತದ್ದು ಮಹತ್ವಪೂರ್ಣವಾಗಿದೆ. ಅದನ್ನು ಕಾಪಾಡುತ್ತಾ ಅಲ್ಲಿರುವ ನೀರು, ಭೂಮಿ, ಗಿಡ,ಬೆಟ್ಟ,ಗಿರಿ ಅಲ್ಲಿನ ಜನರು, ಅವರ ಗೌರವವನ್ನು ಹೆಚ್ಚಿಸಲು ಶ್ರಮಿಸಬೇಕಿದೆ.ಅದಕ್ಕಾಗಿ ನಾವು ಎಲ್ಲ ರೀತಿಯ ಪ್ರಯತ್ನವನ್ನು ಮಾಡಬೇಕಿದೆ. ಅದನ್ನು ಮಾಡದೇ ಇದ್ದರೆ ಏಕತಾ ಉದ್ಘೋಷಕ್ಕೆ ಇತರರ ಮನ್ನಣೆ ಸಿಗಲಾರದು.

Hindu Ekta Mahakumbh ಜಾತಿ ಮತ್ತು ಕುಲವನ್ನು ಮೀರಿ ದೇಶದ ಪ್ರತಿಯೊಂದು ಕಣವನ್ನು ಒಗ್ಗೂಡಿಸುವುದು ಮುಖ್ಯ: ಶ್ರೀ ಚಿನ್ನ ಜೀಯರ್ ಸ್ವಾಮಿಗಳು
ಶ್ರೀ ಚಿನ್ನ ಜೀಯರ್ ಸ್ವಾಮಿಗಳು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 15, 2021 | 4:57 PM

ಮಧ್ಯಪ್ರದೇಶದ ಚಿತ್ರಕೂಟದಲ್ಲಿ 3 ದಿನಗಳ ಹಿಂದೂ ಏಕತಾ ಮಹಾಕುಂಭ (Hindu Ekta mahakumbh) ಆರಂಭವಾಗಿದೆ. ಚಿತ್ರಕೂಟ (chitrakoot)ದಲ್ಲಿ ನಡೆಯುತ್ತಿರುವ ಈ  ಕಾರ್ಯಕ್ರಮದಲ್ಲಿ ಮಾತನಾಡಿದ  ಶ್ರೀ ಚಿನ್ನ ಜೀಯರ್ ಸ್ವಾಮಿಗಳು ನಮ್ಮ ಧರ್ಮಕ್ಷೇತ್ರ ಮತ್ತು ಅದರ ವೈಭವದ ನಿರ್ವಹಣೆಯನ್ನು ನಾವು ರಕ್ಷಿಸುವುದು ಬಹಳ ಮುಖ್ಯ, ಇದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಇದನ್ನು ದರ್ಶನ ಪಡೆದವರಿಗೆ ತೋರಿಸಬೇಕು. ಭಾರತದ ನೆಲದ ಪ್ರತಿಯೊಂದು ಕಣವೂ ಮುಖ್ಯ, ಅದರ ನೀರು, ನೆಲ, ಮರಗಳು ಮತ್ತು ಕಲ್ಲುಗಳು ಮತ್ತು ಜನರು ಎಲ್ಲವೂ ಮುಖ್ಯ. ಅವರನ್ನು ಒಂದಾಗಿ ಇಡಬೇಕು, ಈ ಮೂಲಕ ಇತರರ ಮನ್ನಣೆಯನ್ನೂ ಪಡೆಯುತ್ತೇವೆ ಎಂದಿದ್ದಾರೆ

ಸ್ವಾಮಿಗಳ ಮಾತು 

ಸಣ್ಣ ವ್ಯಕ್ತಿಗಳು ದೊಡ್ಡ ವ್ಯಕ್ತಿಗಳು ಎಂಬ ಯಾವುದೇ ನಿಯಮ ಇಲ್ಲ . ಎಲ್ಲ ಕಡೆಯಲ್ಲಿಯೂ  ನಾವು ಅಂತದ್ದೇ ಸಂಸ್ಕೃತಿಯನ್ನು ನೋಡುತ್ತಿದ್ದೇವೆ. ಭಗವಾನ್ ಶ್ರೀರಾಮ ಪ್ರಪಂಚೀಕರಣ ಕ್ರಮ ತೋರಿಸಿದ್ದಾರೆ. ಕಾಡಿಗೆ ಬಂದು ಋಷಿಗಳ ಜತೆ ಇದ್ದರು. ಆಮೇಲೆ ಅವರು ಕೋತಿಗಳ ಜತೆಗೂ ಇದ್ದರು. ಅಲ್ಲಿದ್ದ ದುಷ್ಟ ಜನರಿಗೆ ಬುದ್ಧಿ ಹೇಳಿದರು, ಆದರೆ ಅವರು ತಮ್ಮ ಸಂಸ್ಕೃತಿಯನ್ನು ಅವರ ಮೇಲೆ ಹೇರಲಿಲ್ಲ. ವಾಲಿಯನ್ನು ಕೊಂದರು ಸುಗ್ರೀವನನ್ನು ರಾಜನನ್ನಾಗಿ ಮಾಡಿದರು. ನೀವು ನಿಮ್ಮ ಕ್ರಮಗಳನ್ನು ಚೆನ್ನಾಗಿ ಸುರಕ್ಷಿತವಾಗಿ ಇರಿಸಿ ಎಂದು ಅವರು ಹೇಳಿಕೊಟ್ಟರು. ಆನಂತರ ಅವರು ಲಂಕೆಗೆ ಹೋಗಿ ರಾವಣನನ್ನು ನಾಶ ಮಾಡಿದ ನಂತರ ಅವರು ತಮ್ಮ ವ್ಯಕ್ತಿಯನ್ನು ಅಲ್ಲಿ ಕೂರಿಸದೆ ವಿಭೀಷಣನನ್ನು ಅಲ್ಲಿ ರಾಜನನನ್ನಾಗಿ ಮಾಡಿದರು. ನೀವು ನಿಮ್ಮ ಧರ್ಮವನ್ನು ಚೆನ್ನಾಗಿ ನೋಡಿಕೊಳ್ಳಿ. ನಮ್ಮ ನಮ್ಮ ಧರ್ಮವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಇಲ್ಲಿ ನಮ್ಮ ಪೂಜ್ಯ ಶ್ರೀಚರಣ್ ರಾಮಭದ್ರಾಚಾರ್ಯ ಜೀ, ಹಿಂದೂ ಏಕತಾ ಯಾಕೆ ಹೇಳುತ್ತಿದ್ದಾರೆ ಎಂದರೆ ಹಿಂದೂ ಧರ್ಮದಲ್ಲಿ ಅನೇಕ ಪಂಥಗಳು ಇವೆ. ದ್ವೈತ, ಅದ್ವೈತ ಇದೆ, ವಿಶಿಷ್ಟಾದ್ವೈತ, ಅಂಚಿತ್ಯಭೇದಾಭೇದ ಹಲವಾರು ಧರ್ಮಗಳಿವೆ. ಅದ್ವೈತದಲ್ಲಿ ಹಲವಾರು ಪ್ರಕಾರಗಳಿವೆ. ಪ್ರತಿಯೊಬ್ಬರು ಅವರ ಅವರ ಧರ್ಮವನ್ನು ಕಾಪಾಡಿಕೊಂಡು ಒಟ್ಟಾಗಿ ದೇಶದ ರಕ್ಷಣೆಗಾಗಿ ಮತ್ತು ನಮ್ಮ ಸಂವಿಧಾನ ಏನಿದೆ ಅದು ಇದಕ್ಕಾಗಿ ರಕ್ಷಣೆಯನ್ನೂ ನೀಡಿದೆ . ನಾವು ನಮ್ಮ ನಮ್ಮ ಧರ್ಮವನ್ನು ಕಾಪಾಡುತ್ತಲೇ ನಾವು ಒಂದು ಸೂರಿನಡಿ ಇರಬೇಕು,ಅದುವೇ ಹಿಂದೂ.

ನಮ್ಮ ಜಗತ್ ಗುರೂಜಿ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾವು ಈ ರೀತಿ ಒಟ್ಟು ಸೇರಿ ಇರಬೇಕು ಹೇಗೆಂದರೆ ನಮ್ಮ ಧರ್ಮದಲ್ಲಿನ ಶ್ರದ್ಧೆ, ಅದನ್ನು ಆಚರಣೆಗೆ ತರುವಲ್ಲಿ ನಾವು ಕಟಿಬದ್ಧರಾಗಬೇಕು.ಬಂಧುಗಳೇ…ಈ ನಡುವೆ ನಮಗೆ ಕುರುಕ್ಷೇತ್ರಕ್ಕೆ ಹೋಗುವ ಸೌಭಾಗ್ಯ ಸಿಕ್ಕಿತು. ಈಗ ಚಿತ್ರಕೂಟಕ್ಕೆ ಬರುವ ಅವಕಾಶ. ಒಂದು ಮಾತು ನಾವು ಹೇಳುತ್ತೇವೆ ಯಾರೂ ಮನಸ್ಸಿಗೆ ನೋವು ತಂದುಕೊಳ್ಳಬೇಡಿ, ಏನಾದರೂ ಉತ್ಸವ ಆಗುತ್ತಿದ್ದರೆ ನಾವು ಆ ಕ್ಷೇತ್ರವನ್ನು ಸಿಂಗರಿಸುತ್ತೇವೆ ಆಮೇಲೆ ನಾವು ನಮ್ಮ ಧರ್ಮ ಕ್ಷೇತ್ರವನ್ನು ಮರೆತುಬಿಡುತ್ತೇವೆ. ನಾವು ನೆನಪಿನಲ್ಲಿಡಬೇಕಾದುದು ನಮ್ಮ ಧರ್ಮ ಕ್ಷೇತ್ರಗಳು ಎಷ್ಟಿವೆಯೋ ಅವುಗಳನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಕ್ಷೇತ್ರದ ವೈಭವ  ಸ್ವಂತಕ್ಕೆ ಅಲ್ಲ,ಅಲ್ಲಿ ಗೆ ದರ್ಶನಕ್ಕೆ ಬರುವ ಜನರಿಗೆ ತೋರಿಸುವುದು ಮುಖ್ಯ. ಇದನ್ನು ನೆನಪಿನಲ್ಲಿಡಿ. ಇಲ್ಲಿಯ ಪ್ರತಿ ಕಣ ಕಣವೂ, ಇಲ್ಲಿಯದ್ದು ಮಾತ್ರವಲ್ಲ ಇಡೀ ಭಾರತದ್ದು ಮಹತ್ವಪೂರ್ಣವಾಗಿದೆ. ಅದನ್ನು ಕಾಪಾಡುತ್ತಾ ಅಲ್ಲಿರುವ ನೀರು, ಭೂಮಿ, ಗಿಡ,ಬೆಟ್ಟ,ಗಿರಿ ಅಲ್ಲಿನ ಜನರು, ಅವರ ಗೌರವವನ್ನು ಹೆಚ್ಚಿಸಲು ಶ್ರಮಿಸಬೇಕಿದೆ.ಅದಕ್ಕಾಗಿ ನಾವು ಎಲ್ಲ ರೀತಿಯ ಪ್ರಯತ್ನವನ್ನು ಮಾಡಬೇಕಿದೆ. ಅದನ್ನು ಮಾಡದೇ ಇದ್ದರೆ ಏಕತಾ ಉದ್ಘೋಷಕ್ಕೆ ಇತರರ ಮನ್ನಣೆ ಸಿಗಲಾರದು. ಈ ಎರಡು ವಿಷಯವನ್ನು ಧರ್ಮಾಚಾರ್ಯರ ಮುಂದಿಟ್ಟು ನನ್ನ ಮಾತು ಮುಗಿಸುತ್ತೇನೆ.

“ಈ ದೇಶದಲ್ಲಿ ವಾಸಿಸುವ ಎಲ್ಲಾ ಭಕ್ತಿ ಪಂಥಗಳನ್ನು ಮಹಾನ್ ಸಂತ ರಾಮಾನುಜಾಚಾರ್ಯ ಮಹಾರಾಜರು ಪ್ರಾರಂಭಿಸಿದರು ಎಂದು ನಾನು ಸ್ವಾಮಿ ರಾಮಭದ್ರಾಚಾರ್ಯ ಮತ್ತು ಇತರ ಸಂತರಿಗೆ ಹೇಳಲು ಬಯಸುತ್ತೇನೆ. ಮೊದಲು ಜಾತಿ-ಕುಲವನ್ನು ಮೀರಿ ಹರಿಜನರಿಗೆ ದೇವಸ್ಥಾನದಲ್ಲಿ ದರ್ಶನ ಪಡೆಯುವ ಹಕ್ಕನ್ನು ನೀಡಿದ್ದರು. ಈಗ 1000 ವರ್ಷಗಳ ನಂತರ ಆ ಮಹಾನ್ ಸಂತನನ್ನು ಸ್ಮರಿಸುತ್ತಾ, ನಾವು ಹೈದರಾಬಾದ್‌ನಲ್ಲಿ ಅವರ ಪಂಚಧಾತು ಪ್ರತಿಮೆಯನ್ನು ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.

Published On - 4:54 pm, Wed, 15 December 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್