ಒಡಹುಟ್ಟಿದ ತಂಗಿಗೇ ತಾಳಿ ಕಟ್ಟಿ ಮದುವೆಯಾದ ಅಣ್ಣ; ಏನಿದು ವಿಚಿತ್ರ ಘಟನೆ?

ವಿವಾಹದ ವಿಡಿಯೋ, ಫೋಟೋಗಳು ಟಿವಿಯಲ್ಲಿ ಪ್ರಸಾರವಾದ ನಂತರ ಗ್ರಾಮದ ಕೆಲವರು ಆ ಅಣ್ಣ-ತಂಗಿಯನ್ನು ಗುರುತಿಸಿದ್ದು, ಅವರ ಹಿನ್ನೆಲೆಯನ್ನು ವಿಚಾರಿಸದೆ ಮದುವೆ ಮಾಡಿದ್ದಕ್ಕೆ ಜನರು ಕೋಪ ವ್ಯಕ್ತಪಡಿಸಿದ್ದಾರೆ.

ಒಡಹುಟ್ಟಿದ ತಂಗಿಗೇ ತಾಳಿ ಕಟ್ಟಿ ಮದುವೆಯಾದ ಅಣ್ಣ; ಏನಿದು ವಿಚಿತ್ರ ಘಟನೆ?
ಮದುವೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 15, 2021 | 6:46 PM

ಲಕ್ನೋ: ಉತ್ತರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಾಮೂಹಿಕ ಮದುವೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಸಾಮೂಹಿಕ ವಿವಾಹದಲ್ಲಿ ಒಡಹುಟ್ಟಿದ ಅಣ್ಣನೇ ತನ್ನ ತಂಗಿಗೆ ತಾಳಿ ಕಟ್ಟಿದ್ದಾನೆ. ಈ ವಿವಾಹದ ವಿಡಿಯೋ, ಫೋಟೋಗಳು ಟಿವಿಯಲ್ಲಿ ಪ್ರಸಾರವಾದ ನಂತರ ಗ್ರಾಮದ ಕೆಲವರು ಆ ಅಣ್ಣ-ತಂಗಿಯನ್ನು ಗುರುತಿಸಿದ್ದು, ಅವರ ಹಿನ್ನೆಲೆಯನ್ನು ವಿಚಾರಿಸದೆ ಮದುವೆ ಮಾಡಿದ್ದಕ್ಕೆ ಜನರು ಕೋಪ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್‌ನ ತುಂಡ್ಲಾದಲ್ಲಿ ಡಿಸೆಂಬರ್ 11ರಂದು ಮುಖ್ಯಮಂತ್ರಿ ಯೋಜನೆಯಡಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಚಂದ್ರಭಾನ್ ಸಿಂಗ್ ಅವರು ಇದೀಗ ಮದುವೆಯಾದ ಆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸರ್ಕಾರದ ಸಾಮೂಹಿಕ ವಿವಾಹ ಯೋಜನೆಯಡಿ ಆ ದಂಪತಿಗೆ ಒದಗಿಸಲಾದ ಗೃಹೋಪಯೋಗಿ ವಸ್ತುಗಳನ್ನು ವಾಪಾಸ್ ತೆಗೆದುಕೊಂಡು ಹೋಗಲಾಗಿದೆ.

ಸಾಮೂಹಿಕ ವಿವಾಹ ಯೋಜನೆಯಡಿ ಮದುವೆಯಾಗುವ ದಂಪತಿಗೆ ನೀಡುವ ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಂಗಿಯನ್ನೇ ಮದುವೆಯಾಗಿದ್ದಾನೆ ಎನ್ನಲಾಗಿದೆ. ಕಳೆದ ಶನಿವಾರ ತುಂಡಲ ಬ್ಲಾಕ್ ಡೆವಲಪ್‌ಮೆಂಟ್ ಕಛೇರಿ ಆವರಣದಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಯೋಜನೆಯಾದ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ 51 ಜೋಡಿಗಳು ವಿವಾಹವಾಗಿದ್ದಾರೆ. ಅವರಲ್ಲಿ ಈ ಅಣ್ಣ-ತಂಗಿ ಕೂಡ ಸೇರಿದ್ದಾರೆ.

ಈ ಅಣ್ಣ-ತಂಗಿ ವಾಸಿಸುವ ತುಂಡ್ಲಾದ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ನರೇಶ್ ಕುಮಾರ್ ಅವರು ಸಮಾರಂಭದ ಮೇಲ್ವಿಚಾರಣೆ ಮತ್ತು ದಂಪತಿಯನ್ನು ಪರಿಶೀಲಿಸಿದ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದ್ದಾರೆ. ಇದರಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮರಸೇನ ಕುಶಾಲ್ಪಾಲ್, ಗ್ರಾಮ ಪಂಚಾಯತ್ ಘಿರೋಲಿ ಕಾರ್ಯದರ್ಶಿ ಅನುರಾಗ್ ಸಿಂಗ್, ಎಡಿಒ ಸಹಕಾರಿ ಸುಧೀರ್ ಕುಮಾರ್ ಮತ್ತು ಸಿಂಗ್ ಸೇರಿದ್ದಾರೆ.

ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರ್ ತಿಳಿಸಿದ್ದಾರೆ. ತಂಗಿಯನ್ನೇ ಮದುವೆಯಾದ ಅಣ್ಣನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಅವರ ಆಧಾರ್ ಕಾರ್ಡ್ ಪರಿಶೀಲನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ನೀಡುವ ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ನೀಡುವ ನಗದು ಮತ್ತು ಸವಲತ್ತುಗಳಿಗಾಗಿ ಈ ರೀತಿ ನಕಲಿ ದಂಪತಿಗಳು ವಿವಾಹವಾಗುತ್ತಿರುವುದು ಇದೇ ಮೊದಲಲ್ಲ. ನವೆಂಬರ್ 2018ರಲ್ಲಿ ಕೂಡ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ ಮಹಿಳೆಯೊಬ್ಬರು ಮರು-ಮದುವೆಯಾಗಿದ್ದರು. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಆ ಮಹಿಳೆಗೆ 2018ರ ಫೆಬ್ರವರಿಯಲ್ಲಿ ಮೊದಲು ವಿವಾಹವಾಗಿತ್ತು. ಆದರೆ, ಹಣದ ಪ್ರಯೋಜನಗಳನ್ನು ಪಡೆಯಲು ಅವರು ಸಮಾರಂಭಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಆಘಾತಕಾರಿ ಸಂಗತಿಯೆಂದರೆ, ಆಕೆಯ ಗಂಡ ಆ ವಿವಾಹ ಕಾರ್ಯಕ್ರಮಕ್ಕೆ ಬರದಿದ್ದಾಗ ಆಕೆ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದಳು.

ಉತ್ತರ ಪ್ರದೇಶ ಸರ್ಕಾರದ ಯೋಜನೆಯಾದ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯು ವಿವಾಹಗಳನ್ನು ನಡೆಸುತ್ತದೆ. ವರದಿಯ ಪ್ರಕಾರ, ಪ್ರತಿ ದಂಪತಿಗಳಿಗೆ ನೀಡಿದ ಮನೆಯ ಉಪಯೋಗಕ್ಕೆ ಬಳಸುವ ಉಡುಗೊರೆಗಳನ್ನು ಹೊರತುಪಡಿಸಿ ಪ್ರತಿ ದಂಪತಿಗೆ 35,000 ರೂ. ಖರ್ಚು ಮಾಡಲಾಗುತ್ತದೆ. ಮದುವೆಯಾಗುವ ವಧುವಿನ ಬ್ಯಾಂಕ್ ಖಾತೆಗೆ 20,000 ರೂಪಾಯಿಗಳನ್ನು ಠೇವಣಿ ಮಾಡಲಾಗುತ್ತದೆ ಮತ್ತು 10,000 ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ: Shocking News: ಪಕ್ಕದಲ್ಲಿ ಮಲಗಿದ್ದ 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ!

Shocking News: ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಗಂಡನ ಮರ್ಮಾಂಗ ಕತ್ತರಿಸಿದ ಹೆಂಡತಿ!

ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ