ಟ್ರೆಡಿಷನಲ್ ಧಿರಿಸಿನಲ್ಲಿ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ ಚಿರಂಜೀವಿ ಹಾಗೂ ರಾಮ್ ಚರಣ್

| Updated By: Digi Tech Desk

Updated on: Jan 22, 2024 | 11:26 AM

ಐಷಾರಾಮಿ ಕಾರಲ್ಲಿ ಬಂದ ರಾಮ್ ಚರಣ್-ಚಿರಂಜೀವಿ ನಂತರ ಪ್ರೈವೆಟ್​ ಜೆಟ್​ನಲ್ಲಿ ಅಯೋಧ್ಯೆಯತ್ತ ಮುಖ ಮಾಡಿದರು. ಈ ವೇಳೆ ಇವರು ಸಾಂಪ್ರದಾಯಿಕ ಬಟ್ಟೆಯಲ್ಲಿ ಕಾಣಿಸಿಕೊಂಡರು.

ಅಯೋಧ್ಯೆಯ ರಾಮ ಮಂದಿರದಲ್ಲಿ (Rama Mandir) ಇಂದು (ಜನವರಿ 22) ರಾಮ​ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಅಯೋಧ್ಯೆಗೆ ತೆರಳಿದ್ದಾರೆ. ಮುಂಜಾನೆಯೇ ಚಿರಂಜೀವಿ ಹಾಗೂ ರಾಮ್ ಚರಣ್ ಫ್ಯಾಮಿಲಿ ಸಮೇತ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಐಷಾರಾಮಿ ಕಾರಲ್ಲಿ ಬಂದ ಇವರು ನಂತರ ಪ್ರೈವೆಟ್​ ಜೆಟ್​ನಲ್ಲಿ ಅಯೋಧ್ಯೆಯತ್ತ ಮುಖ ಮಾಡಿದರು. ಈ ವೇಳೆ ಇವರು ಸಾಂಪ್ರದಾಯಿಕ ಬಟ್ಟೆಯಲ್ಲಿ ಕಾಣಿಸಿಕೊಂಡರು. ಈ ವಿಡಿಯೋ ವೈರಲ್ ಆಗಿದೆ. ಐತಿಹಾಸಿಕ ಕ್ಷಣವನ್ನು ತುಂಬಿಕೊಳ್ಳುವ ಅವಕಾಶ ಇವರಿಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 22, 2024 10:03 AM