Updated on:Jan 13, 2024 | 1:06 PM
ರಾಮ್ ಚರಣ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆಯುತ್ತಾರೆ. ಈ ಪದ್ದತಿಯನ್ನು ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ.
ಸಂಕ್ರಾಂತಿ ಸಮೀಪಿಸಿದೆ. ಈ ಬಾರಿ ರಾಮ್ ಚರಣ್ ಅವರು ಬೆಂಗಳೂರಿನಲ್ಲಿ ಸಂಕ್ರಾಂತಿ ಆಚರಣೆ ಮಾಡಲಿದ್ದಾರೆ. ಹೈದರಾಬಾದ್ನಿಂದ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಮಗಳು ಕ್ಲಿನ್ಕಾರಾ ಜೊತೆ ಬೆಂಗಳೂರಿಗೆ ತೆರಳಿದ್ದಾರೆ.
ಈ ದಂಪತಿ ಜೊತೆ ನೆಚ್ಚಿನ ಶ್ವಾನ ಕೂಡ ಇದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಮೇಲೆ ರಾಮ್ ಚರಣ್ಗೆ ಸಾಕಷ್ಟು ಪ್ರೀತಿ ಇದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಮಂತ್ರಣ ಬಂದಿದೆ ಎಂದು ದಂಪತಿ ಹೇಳಿಕೊಂಡಿಡ್ದಾರೆ. ಹೀಗಾಗಿ, ಜನವರಿ 22ರಂದು ರಾಮ್ ಚರಣ್ ಹಾಗೂ ಉಪಾಸನಾ ಅಲ್ಲಿಗೆ ತೆರಳಲಿದ್ದಾರೆ.
ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ಹೊಸ ಸಿನಿಮಾದಲ್ಲಿ ಶಿವರಾಜ್ಕುಮಾರ್ ಕೂಡ ನಟಿಸುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.
Published On - 1:00 pm, Sat, 13 January 24