ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ: ಆರ್​ಸಿಬಿ ಫ್ಯಾನ್ಸ್ ಹುಚ್ಚಾಟ, ವಿಡಿಯೋ ನೋಡಿ ​

Edited By:

Updated on: May 06, 2025 | 11:36 AM

ಚಿತ್ರದುರ್ಗದ ಮಾರಮ್ಮನಹಳ್ಳಿಯಲ್ಲಿ ಆರ್‌ಸಿಬಿ ತಂಡದ ಗೆಲುವನ್ನು ಆಚರಿಸಲು ಮೇಕೆ ಬಲಿ ನೀಡಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಕೊಹ್ಲಿ ಕಟೌಟ್ ಮುಂದೆ ಯುವಕರು ಮೇಕೆ ಬಲಿ ನೀಡಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಚಿತ್ರದುರ್ಗ, ಮೇ 06: ವಿರಾಟ್​ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ ನೀಡಿ ಆರ್​ಸಿಬಿ (RCB) ಅಭಿಮಾನಿಗಳಿಂದ ಹುಚ್ಚಾಟ ಮೆರೆದಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ನಡೆದಿದೆ. ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲುವು ಹಿನ್ನೆಲೆ ಮೇಕೆ ಬಲಿ ನೀಡಲಾಗಿದೆ. ವಿಡಿಯೋ ಕೂಡ ವೈರಲ್ ಆಗಿದೆ. ಇದರ ಬೆನ್ನಲ್ಲೇ ಸಣ್ಣಪಾಲಯ್ಯ, ಜಯಣ್ಣ ಮತ್ತು ತಿಪ್ಪೇಸ್ವಾಮಿ ಎಂಬುವವರನ್ನು ಪೊಲೀಸರು ಬಧಿಸಿದ್ದು, ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.