ಅಪ್ಪನನ್ನು ಡೈರೆಕ್ಟರ್ ಸರ್ ಎಂದು ಕರೆದ ದುನಿಯಾ ವಿಜಯ್ ಮಗಳು ಮೋನಿಷಾ
ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅವರ ಪುತ್ರಿ ಮೋನಿಷಾ ನಟಿಸುತ್ತಿದ್ದು, ಈ ಚಿತ್ರದಲ್ಲಿ ನಟಿಸಲು ತಮಗೆ ಭಯ ಇದೆ ಎಂದು ಹೇಳಿದ್ದಾರೆ. ‘ಕಳೆದ ಎರಡು ಸಿನಿಮಾಗಳ ಸೆಟ್ಗೆ ಭೇಟಿ ನೀಡಿದಾಗ ನಾನು ನಮ್ಮ ಅಪ್ಪನನ್ನು ಅಲ್ಲಿ ನೋಡುತ್ತಿರಲಿಲ್ಲ. ನಿರ್ದೇಶಕ ವಿಜಯ್ ಕುಮಾರ್ ಅಲ್ಲಿ ಇರುತ್ತಿದ್ದರು’ ಎಂದಿದ್ದಾರ ಮೋನಿಷಾ.
‘ಸಿಟಿ ಲೈಟ್ಸ್’ ಸಿನಿಮಾ ಮೂಲಕ ದುನಿಯಾ ವಿಜಯ್ ಮಗಳು ಮೋನಿಷಾ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಸಿನಿಮಾಗೆ ದುನಿಯಾ ವಿಜಯ್ ಅವರೇ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಮೋನಿಷಾ ಮಾತನಾಡಿದ್ದಾರೆ. ತಂದೆಯನ್ನು ಅವರು ಡೈರೆಕ್ಟರ್ ಸರ್ ಎಂದು ಕರೆದಿದ್ದಾರೆ. ‘ಸೆಟ್ನಲ್ಲಿ ತಂದೆ-ಮಗಳು ಅಲ್ಲ. ಸೆಟ್ನಲ್ಲಿ ಅವರು ಡೈರೆಕ್ಟರ್ ವಿಜಯ್ ಕುಮಾರ್. ನಾನು ಅವರ ನಟಿ’ ಎಂದು ಮೋನಿಷಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.