ಪಾರ್ಕಿಂಗ್ನಲ್ಲಿ ಪಾರ್ಕ್ ಮಾಡಿದ್ದ ವಾಹನವನ್ನ ಎತ್ಕೊಂಡು ಹೋಗ್ತಾರೆ ಟೋಯಿಂಗ್ ಸಿಬ್ಬಂದಿ
ಹೈಪರ್ ಮಾರ್ಕೆಟ್ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ ವಾಹನಗಳನ್ನ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಸ್ಟೇಷನ್ ಟೊಯಿಂಗ್ ಸಿಬ್ಬಂದಿ ಟೋ ಮಾಡಿಕೊಂಡು ಬಂದಿದ್ದಾರೆ. ಟೋಯಿಂಗ್ ಸಿಬ್ಬಂದಿಯ ಕ್ರಮ ಕಂಡು ವಾಹನ ಸವಾರರು ಕಂಗಾಲಾಗಿದ್ದಾರೆ.
ಪಾರ್ಕಿಂಗ್ನಲ್ಲಿ ಪಾರ್ಕ್ ಮಾಡಿದ್ರೂ ನಿಮ್ಮ ವಾಹನ ಟೋ ಆಗುತ್ತೆ ಹುಷಾರ್! ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ರೋಡಿನಲ್ಲಿ ಟೊಯಿಂಗ್ ಸಿಬ್ಬಂದಿಯ ಅಂಧಾ ದರ್ಬಾರ್ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೈಪರ್ ಮಾರ್ಕೆಟ್ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ ವಾಹನಗಳನ್ನ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಸ್ಟೇಷನ್ ಟೊಯಿಂಗ್ ಸಿಬ್ಬಂದಿ ಟೋ ಮಾಡಿಕೊಂಡು ಬಂದಿದ್ದಾರೆ. ಟೋಯಿಂಗ್ ಸಿಬ್ಬಂದಿಯ ಕ್ರಮ ಕಂಡು ವಾಹನ ಸವಾರರು ಕಂಗಾಲಾಗಿದ್ದಾರೆ.
ಹೈಪರ್ ಮಾರ್ಕೆಟ್ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ ವಾಹನಗಳನ್ನು ಟೋಯಿಂಗ್ ಸಿಬ್ಬಂದಿ ಟೋ ಮಾಡಿದ್ದಾರೆ. ವಾಹನ ಮಾಲಿಕರಿಗೆ ಒಂದು ಬಾರಿಯೂ ಕೂಗದೇ ಏಕಾಏಕಿ ಟೋ ಮಾಡಲಾಗಿದೆ. ಟೋಯಿಂಗ್ ಸಿಬ್ಬಂದಿ ಜತೆ ತೆರಳಿದ್ದ ಟ್ರಾಫಿಕ್ ಎ ಎಸ್ ಐ ಮೆಮೋ ನೀಡುತ್ತೇನೆಂದ ಇನ್ಸ್ಪೆಕ್ಟರ್ ವೆಂಕಟೇಶ್ ತಿಳಿಸಿದ್ದಾರೆ. ಪಾರ್ಕಿಂಗ್ ನಲ್ಲಿರುವ ವಾಹನಗಳನ್ನು ಎತ್ತದಂತೆ ಪ್ರತಿಬಾರಿಯೂ ನಾವು ಹೇಳುತ್ತೇವೆ. ಆದರೆ ಇಂಥ ತಪ್ಪುಗಳು ಪದೇ ಪದೇ ನಡೆಯೋದು ಸರಿಯಲ್ಲ. ಅಕ್ರಮವಾಗಿ ಟೋ ಮಾಡಿದ ಸಿಬ್ಬಂದಿಗೆ ಕೆಲಸದಿಂದ ವಜಾ ಮಾಡಿಸೋದಾಗಿ ತಿಳಿಸಿದ್ದಾರೆ.