ಜನೋತ್ಸವ ಕಾರ್ಯಕ್ರಮ ರದ್ದುಗೊಳಿಸಿದ ಕಾರಣ ವಿವರಿಸಿದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜನೋತ್ಸವ ಕಾರ್ಯಕ್ರಮ ರದ್ದುಗೊಳಿಸಿದ ಕಾರಣ ವಿವರಿಸಿದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2022 | 10:48 AM

ಮಂಗಳವಾರ ರಾತ್ರಿ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ತಾಯಿ ಮತ್ತು ಪತ್ನಿ ದುಃಖಸಾಗರದಲ್ಲಿ ಮುಳುಗಿರುವಾಗ ಮತ್ತು ಶಿವಮೊಗ್ಗದ ಹರ್ಷನ ತಾಯಿಯ ಇನ್ನೂ ವೇದನೆ ಅನುಭವಿಸುತ್ತಿರುವಾಗ ಇಂಥ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ಸರ್ಕಾರದ ಸಾಧನೆ ಸಮಾವೇಶ ಜನೋತ್ಸವವನ್ನು ರದ್ದು ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯಾಕೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಅನ್ನೋದನ್ನು ಕೂಡ ವಿವರಿಸಿದರು. ಮಂಗಳವಾರ ರಾತ್ರಿ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು (Praveen Nettaru) ಅವರ ತಾಯಿ ಮತ್ತು ಪತ್ನಿ ದುಃಖಸಾಗರದಲ್ಲಿ ಮುಳುಗಿರುವಾಗ ಮತ್ತು ಶಿವಮೊಗ್ಗದ ಹರ್ಷನ (Harsha) ತಾಯಿಯ ಇನ್ನೂ ವೇದನೆ ಅನುಭವಿಸುತ್ತಿರುವಾಗ ಇಂಥ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.