ಮಳೆಯಿಂದ ಹಾಳಾಗಿರುವ ಇನ್ಫ್ರಾಸ್ಟ್ರಕ್ಚರ್ ದುರಸ್ತಿಗೆ ಮುಖ್ಯಮಂತ್ರಿ ಬೊಮ್ಮಾಯಿ 500 ಕೋಟಿ ರೂ. ಪರಿಹಾರ ಘೋಷಿಸಿದರು
ಇದು ಮೊದಲ ಹಂತದ ಪರಿಹಾರ ನಿಧಿಯಾಗಿದ್ದು ಆಗಸ್ಟ್ ತಿಂಗಳಲ್ಲಿ ಪುನಃ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಉಡುಪಿ: ಮಳೆ ಕರ್ನಾಟಕದಲ್ಲಿ ಕೋಲಾಹಲ ಸೃಷ್ಟಿಸಿದೆ. ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಗಳ ಪ್ರವಾಸ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬುಧವಾರ ಉಡುಪಿಯಲ್ಲಿ (Udupi) ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಳೆಯಿಂದ ಆಗಿರುವ ಹಾನಿ ಅದರಲ್ಲೂ ವಿಶೇಷವಾಗಿ ಇನ್ಫ್ರಾಸ್ಟ್ರಕ್ಚರ್ (infrastructure) ಸರಿಪಡಿಸಲು ಕೂಡಲೇ 500 ಕೋಟಿ ರೂ. ಬಿಡುಗಡೆ ಮಾಡುವ ಘೋಷಣೆ ಮಾಡಿದರು. ಇದು ಮೊದಲ ಹಂತದ ಪರಿಹಾರ ನಿಧಿಯಾಗಿದ್ದು ಆಗಸ್ಟ್ ತಿಂಗಳಲ್ಲಿ ಪುನಃ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಇದನ್ನೂ ಓದಿ: Oppo: ವಿವೋ ನಂತರ ಇದೀಗ ಚೀನಾ ಮೂಲದ ಒಪ್ಪೋ ಮೇಲೆ 4389 ಕೋಟಿ ರೂಪಾಯಿ ತೆರಿಗೆ ವಂಚನೆ ಆರೋಪ