Oppo: ವಿವೋ ನಂತರ ಇದೀಗ ಚೀನಾ ಮೂಲದ ಒಪ್ಪೋ ಮೇಲೆ 4389 ಕೋಟಿ ರೂಪಾಯಿ ತೆರಿಗೆ ವಂಚನೆ ಆರೋಪ

ಚೀನಾ ಮೂಲದ ಮೊಬೈಲ್ ಕಂಪೆನಿ ಒಪ್ಪೋ ವಿರುದ್ಧ 4389 ಕೋಟಿ ರೂಪಾಯಿಯ ತೆರಿಗೆ ವಂಚನೆಯ ಆರೋಪವನ್ನು ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Oppo: ವಿವೋ ನಂತರ ಇದೀಗ ಚೀನಾ ಮೂಲದ ಒಪ್ಪೋ ಮೇಲೆ 4389 ಕೋಟಿ ರೂಪಾಯಿ ತೆರಿಗೆ ವಂಚನೆ ಆರೋಪ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 13, 2022 | 2:25 PM

ವಿವೋ (Vivo) ನಂತರ ಮತ್ತೊಂದು ಚೀನಾ ಮೂಲದ ಮೊಬೈಲ್ ಕಂಪೆನಿಯು ಅಕ್ರಮ ಹಣ ವರ್ಗಾವಣೆ (Money Laundering) ಹಾಗೂ ತೆರಿಗೆ ವಂಚನೆಗಾಗಿ ಪರಿಶೀಲನೆಯಲ್ಲಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ವು ಮೊಬೈಲ್ ಕಂಪೆನಿಯಾದ ಒಪ್ಪೋ ಇಂಡಿಯಾದಲ್ಲಿ ಹುಡುಕಾಟ ನಡೆಸಿದ್ದು, ಈ ಕಂಪೆನಿಯು ಸುಮಾರು ರೂ. 4389 ಕೋಟಿ ಸೀಮಾ ಸುಂಕ ವಂಚನೆ ಮಾಡಿರುವುದನ್ನು ಪತ್ತೆಹಚ್ಚಿದೆ. ತನಿಖೆಯ ಸಂದರ್ಭದಲ್ಲಿ ಒಪ್ಪೋ ಇಂಡಿಯಾದ ಕಚೇರಿ ಆವರಣ ಮತ್ತು ಅದರ ಪ್ರಮುಖ ನಿರ್ವಹಣಾ ಉದ್ಯೋಗಿಗಳ ನಿವಾಸಗಳಲ್ಲಿ ಡಿಆರ್​ಐನಿಂದ ಹುಡುಕಾಟ ನಡೆಸಲಾಯಿತು. ಇದು ಒಪ್ಪೋ ಇಂಡಿಯಾ ಆಮದು ಮಾಡಿಕೊಂಡ ಕೆಲವು ವಸ್ತುಗಳನ್ನು ಮೊಬೈಲ್ ಫೋನ್ ತಯಾರಿಕೆಯಲ್ಲಿ ಬಳಸಿ, ವಿವರಣೆಯಲ್ಲಿ ಉದ್ದೇಶಪೂರ್ವಕ ತಪ್ಪು ಘೋಷಣೆಯನ್ನು ಸೂಚಿಸುವ ದೋಷಾರೋಪಣೆಯ ಪುರಾವೆಗಳನ್ನು ಮರುಪಡೆಯಲು ಕಾರಣವಾಯಿತು.

“ಈ ತಪ್ಪು ಘೋಷಣೆಯು ಒಪ್ಪೋ ಇಂಡಿಯಾದಿಂದ ಆಮದು ಮಾಡಿಕೊಳ್ಳುವ ಸಮಯದಲ್ಲಿ ರೂ. 2,981 ಕೋಟಿ ಮೊತ್ತದ ಅನರ್ಹ ಸುಂಕ ವಿನಾಯಿತಿ ಪ್ರಯೋಜನಗಳನ್ನು ತಪ್ಪಾಗಿ ಪಡೆದುಕೊಂಡಿದೆ. ಇತರರಲ್ಲಿ ಒಪ್ಪೋ ಇಂಡಿಯಾದ ಹಿರಿಯ ನಿರ್ವಹಣಾ ಉದ್ಯೋಗಿಗಳು ಮತ್ತು ದೇಶೀಯ ಪೂರೈಕೆದಾರರನ್ನು ಕಸ್ಟಮ್ಸ್ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಅವರ ಸ್ವಯಂಪ್ರೇರಿತ ಹೇಳಿಕೆಗಳಲ್ಲಿ ಮೊದಲು ತಪ್ಪಾದ ವಿವರಣೆ ಸಲ್ಲಿಕೆಯನ್ನು ಒಪ್ಪಿಕೊಂಡಿದ್ದಾರೆ,” ಎಂದು PIB ಬಿಡುಗಡೆ ಮಾಡಿದ ಮಾಹಿತಿಯಲ್ಲಿದೆ.

ತಂತ್ರಜ್ಞಾನ/ಬ್ರಾಂಡ್/ಐಪಿಆರ್ ಪರವಾನಗಿಯ ಬದಲಿಗೆ ಚೀನಾ ಮೂಲದ ಕಂಪೆನಿಗಳು ಸೇರಿದಂತೆ ವಿವಿಧ ಬಹುರಾಷ್ಟ್ರೀಯ ಕಂಪೆನಿಗಳಿಗೆ ‘ರಾಯಧನ’ ಮತ್ತು ‘ಪರವಾನಗಿ ಶುಲ್ಕ’ ಪಾವತಿಗಾಗಿ ಒಪ್ಪೋ ಇಂಡಿಯಾ ನಿಬಂಧನೆಗಳನ್ನು ರವಾನಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪ್ರಕಟಣೆ ತಿಳಿಸಿದೆ. ಒಪ್ಪೋ ಇಂಡಿಯಾ ಪಾವತಿಸಿದ ‘ರಾಯಧನ’ (ರಾಯಲ್ಟಿ) ಮತ್ತು ‘ಪರವಾನಗಿ ಶುಲ್ಕಗಳು’ ಅವರು ಆಮದು ಮಾಡಿಕೊಂಡ ಸರಕುಗಳ ವಹಿವಾಟು ಮೌಲ್ಯದಲ್ಲಿ ಸೇರಿಸಲಾಗುತ್ತಿಲ್ಲ. ಸೀಮಾ ಸುಂಕ ಕಾಯ್ದೆ, 1962ರ ಸೆಕ್ಷನ್ 14 ಅನ್ನು ಉಲ್ಲಂಘಿಸಿದಲ್ಲಿ ಕಸ್ಟಮ್ಸ್ ನಿಯಮಾವಳಿ 10ರೊಂದಿಗೆ ಮೌಲ್ಯಮಾಪನ (ಆಮದು ಮಾಡಿಕೊಂಡ ಸರಕುಗಳ ಮೌಲ್ಯ ನಿರ್ಣಯ) ನಿಯಮಗಳು 2007 ಓದಬೇಕು. ಈ ಖಾತೆಯಲ್ಲಿ M/s ಒಪ್ಪೋ ಇಂಡಿಯಾದಿಂದ ಸುಂಕ ವಂಚನೆ ರೂ. 1,408 ಕೋಟಿಯಷ್ಟಾಗಿದೆ ಎಂದು ಆರೋಪಿಸಲಾಗಿದೆ.

ಒಪ್ಪೋ ಇಂಡಿಯಾ ಭಾರತದಾದ್ಯಂತ ಉತ್ಪಾದನೆ, ಜೋಡಣೆ, ಸಗಟು ವ್ಯಾಪಾರ, ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು ಅದರ ಬಿಡಿಭಾಗಗಳ ವಿತರಣೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಒಪ್ಪೋ ಇಂಡಿಯಾ, ಒಪ್ಪೋ, ಒನ್​ಪ್ಲಸ್ ಮತ್ತು ರಿಯಾಲ್ಮಿ ಸೇರಿದಂತೆ ವಿವಿಧ ಬ್ರಾಂಡ್‌ಗಳ ಮೊಬೈಲ್ ಫೋನ್‌ಗಳಲ್ಲಿ ವ್ಯವಹರಿಸುತ್ತದೆ.

ಈ ಹಿಂದೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ವಿವೋ ಇಂಡಿಯಾದ ಖಾತೆಗಳನ್ನು ಸ್ಥಗಿತಗೊಳಿಸಿತ್ತು. ಇಂದು ನ್ಯಾಯಾಲಯವು ಸ್ಥಗಿತವನ್ನು ಆ ತೆಗೆದುಹಾಕಿತು ಮತ್ತು 119 ಮಿಲಿಯನ್ ಡಾಲರ್ ಬ್ಯಾಂಕ್ ಗ್ಯಾರಂಟಿ ನೀಡಲು ಚೀನಾ ಕಂಪೆನಿಗೆ ಆದೇಶಿಸಿದೆ ಎಂಬುದಾಗಿ ಕಂಪೆನಿಯ ವಕೀಲರು ರಾಯಿಟರ್ಸ್​ಗೆ ತಿಳಿಸಿದ್ದಾರೆ. ಇಡಿ ಪ್ರಕಾರ, ವಿವೋ ಇಂಡಿಯಾದ ಸುಮಾರು 23 ಸಂಬಂಧಿತ ಸಂಸ್ಥೆಗಳಾದ ಗ್ರ್ಯಾಂಡ್ ಪ್ರಾಸ್ಪೆಕ್ಟ್ ಇಂಟರ್​ನ್ಯಾಷನಲ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್ (ಜಿಪಿಐಸಿಪಿಎಲ್)ನಂಥವು ಬೃಹತ್ ಮೊತ್ತವನ್ನು ವರ್ಗಾಯಿಸಿದೆ ಮತ್ತು ಮಾರಾಟದಿಂದ ಬಂದ ಒಟ್ಟು ರೂ. 1,25,185 ಕೋಟಿಗಳಲ್ಲಿ ರೂ. 62,476 ಕೋಟಿ, ಅಂದರೆ ಸುಮಾರು ಶೇ 50 ರಷ್ಟು ಭಾರತದಿಂದ ಹೊರಗೆ, ಮುಖ್ಯವಾಗಿ ಚೀನಾಕ್ಕೆ ವರ್ಗಾವಣೆ ಮಾಡಲಾಗಿದೆ.

Published On - 2:25 pm, Wed, 13 July 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು