ಅಗಲಿದ ದಲಿತ ಚಳುವಳಿ ಹಿರಿಯ ನಾಯಕ ಲಕ್ಷ್ಮಿನಾರಾಯಣ ನಾಗವಾರಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿದ್ದರಾಮಯ್ಯ

ಅಗಲಿದ ದಲಿತ ಚಳುವಳಿ ಹಿರಿಯ ನಾಯಕ ಲಕ್ಷ್ಮಿನಾರಾಯಣ ನಾಗವಾರಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 01, 2025 | 8:25 PM

ನಿನ್ನೆ ಲಕ್ಷ್ಮಿನಾರಾಯಣ ನಾಗವಾರ ಅವರು ಇಹಲೋಕದ ಯಾತ್ರೆ ಮುಗಿಸಿದ ಸುದ್ದಿ ಗೊತ್ತಾಗುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ನುಡಿ ನಮನ ಸಲ್ಲಿಸಿದ್ದರು. ಸುಮಾರು ಮೂರು ದಶಕಗಳ ಕಾಲ ಲಕ್ಷ್ಮಿನಾರಾಯಣ ಅವರೊಂದಿಗೆ ಒಡನಾಟವಿತ್ತು ಮತ್ತು ಅವರು ತನಗೆ ಕುಟುಂಬದ ಒಬ್ಬ ಸದಸ್ಯನಂತಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದರು.

ಬೆಂಗಳೂರು: ನಗರದಲ್ಲಿ ನಿನ್ನೆ ದೈವಾಧೀನರಾದ ಪ್ರಗತಿಪರ ಹೋರಾಟಗಾರ ಮತ್ತು ದಮನಿತರ ದನಿ ಎನಿಸಿಕೊಂಡಿದ್ದ ದಲಿತ ಚಳುವಳಿಯ ಹಿರಿಯ ನಾಯಕ ಲಕ್ಷ್ಮಿನಾರಾಯಣ ನಾಗವಾರ ಅವರ ಪಾರ್ಥೀವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರದ್ಧಾಂಜಲಿ ಸಮರ್ಪಿಸಿದರು. ಬೆಂಗಳೂರಿನ ನಾಗವಾರದಲ್ಲಿರುವ ಮೃತರ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ದುಃಖತಪ್ತ ಲಕ್ಷ್ಮಿನಾರಾಯಣ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಲಕ್ಷ್ಮಿನಾರಾಯಣ ಅಂತ್ಯಸಂಸ್ಕಾರವನ್ನು ಸರ್ಕಾರೀ ಗೌರವಗಳೊಂದಿಗೆ ನೆರವೇರಿಸುವಂತೆ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಚಿನ್ ಪ್ರಕರಣದಲ್ಲಿ ಎಲ್ಲೂ ಪ್ರಿಯಾಂಕ್ ಖರ್ಗೆ ಹೆಸರು ಉಲ್ಲೇಖವಾಗಿಲ್ಲ, ರಾಜೀನಾಮೆ ಯಾಕೆ ನೀಡಬೇಕು? ಸಿದ್ದರಾಮಯ್ಯ