LPG Free Connection: ಬಿಪಿಎಲ್ ಕುಟುಂಬಗಳು ಉಚಿತ ಎಲ್‌ಪಿಜಿ ಸಂಪರ್ಕ ಪಡೆಯುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರ
ಬಡತನ ರೇಖೆಗಿಂತ ಕೆಳಗಿರುವವರು ಸರ್ಕಾರದ ಉಚಿತ ಎಲ್‌ಪಿಜಿ ಯೋಜನೆಯಾದ ಉಜ್ವಲಾ ಅನುಕೂಲವನ್ನು ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಹಂತಹಂತವಾದ ವಿವರಣೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಅದು ವ್ಯಾಪಕವಾಗಿ ಬಳಕೆ ಸಹ ಆಗುತ್ತಿದೆ. ಇದುವರೆಗೆ 11 ರಾಜ್ಯಗಳಲ್ಲಿ 95.1 ಲಕ್ಷ ಸಂಪರ್ಕಗಳನ್ನು ನೋಂದಾಯಿಸಲಾಗಿದೆ ಮತ್ತು ವಿತರಿಸಲಾಗಿದೆ. ಯಾವುದೇ ಗ್ರಾಮೀಣ ಅಥವಾ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬ ಅಥವಾ ವ್ಯಕ್ತಿಗಳು ಮರ, ಇದ್ದಿಲು, ಹಸುವಿನ ಸಗಣಿ ಅಥವಾ ಇತರ ಅನಾರೋಗ್ಯಕರ ಇಂಧನ ಮೂಲಗಳ ಮೇಲೆ ಅಡುಗೆ ಮಾಡಲು ಆಶ್ರಯಿಸಬಾರದು ಎಂಬ ಕಾರಣಕ್ಕೆ ಈ ಯೋಜನೆಯನ್ನು ರೂಪಿಸಲಾಗಿದೆ. ಭಾರತದಲ್ಲಿನ ಗ್ರಾಮೀಣ ಕುಟುಂಬಗಳು ಯಾವಾಗಲೂ ಎಲ್ಪಿಜಿಯಂತಹ ಆಧುನಿಕತೆಗೆ ಸೀಮಿತ ಕಂಪರ್ಕ ಹೊಂದಿರುತ್ತವೆ ಅಥವಾ ಯಾವುದೇ ಸಂಪರ್ಕ ಹೊಂದಿರುವುದಿಲ್ಲ.
ಆದರೆ, ಅನುಕೂಲಕ್ಕಾಗಿ ಒಂದಕ್ಕಿಂತ ಹೆಚ್ಚು ಸಂಪರ್ಕಗಳನ್ನು ಹೊಂದಿರುವ ಬಹಳಷ್ಟು ಖಾಸಗಿ ಎಲ್‌ಪಿಜಿ ಸಂಪರ್ಕ ಹೊಂದಿರುವವರು ಹೆಚ್ಚುವರಿ ಸಂಪರ್ಕಗಳನ್ನು ಸರೆಂಡರ್ ಮಾಡಿರುವುದರಿಂದ ಅದು ಈಗ ಬದಲಾಗುತ್ತಿದೆ. ಜತೆಗೆ, ಸರ್ಕಾರವು ಹೆಚ್ಚುವರಿ ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಸೇವಾ ಮೂಲಸೌಕರ್ಯಗಳನ್ನು ದೊರಕಿಸಿದೆ. ಇದು ಈಗ ಗ್ರಾಮೀಣ ಬಡವರಿಗೆ ವಿತರಿಸಬಹುದಾದ ಬಹಳಷ್ಟು ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಉಪಕರಣಗಳನ್ನು ಮುಕ್ತಗೊಳಿಸಿದೆ.
ಉಜ್ವಲ ಯೋಜನೆಗೆ ಅರ್ಹತೆಯ ಮಾನದಂಡ:
ಸರ್ಕಾರವು ನೀಡುವ ರಿಯಾಯಿತಿ ಅಥವಾ ಉಚಿತ ಎಲ್‌ಪಿಜಿ ಸಂಪರ್ಕಗಳಿಗೆ ಅರ್ಹರಾಗಲು ಅರ್ಜಿದಾರರಿಗೆ ಈ ಅರ್ಹತೆ ಇರಬೇಕು:
– ಮಹಿಳೆಯಾಗಿದ್ದು, ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
– ಆಯಾ ರಾಜ್ಯ ಸರ್ಕಾರದಲ್ಲಿ ಬಿಪಿಎಲ್ ಕುಟುಂಬ/ಕುಟುಂಬ/ಘಟಕವಾಗಿ ನೋಂದಾಯಿಸಿದವರು.
– ನಕಲು ಮತ್ತು ತಪ್ಪು ನಿರ್ವಹಣೆಯನ್ನು ತಪ್ಪಿಸಲು SECC-2011 ಡೇಟಾ (ಗ್ರಾಮೀಣ)ದಲ್ಲಿ ನೋಂದಾಯಿಸಿರಬೇಕು ಮತ್ತು ಪ್ರಸ್ತುತಪಡಿಸಿರಬೇಕು.
– ಅಸ್ತಿತ್ವದಲ್ಲಿರುವ LPG ಸಂಪರ್ಕದಿಂದ ನೋಂದಣಿ ಹಿಂಪಡೆಯಬೇಕು.
ಈ ಯೋಜನೆಯು ಬಿಪಿಎಲ್ ಕುಟುಂಬಗಳಿಗಾಗಿ ಇದ್ದು, ಪ್ರತಿ ಬಿಪಿಎಲ್ ಕುಟುಂಬಕ್ಕೆ ರೂ. 1,600ರ ವರೆಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ ಮತ್ತು ಈ ಉದ್ದೇಶಕ್ಕಾಗಿ 5 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ಕಾಯ್ದಿರಿಸಲಾಗಿದೆ. ಸಾಂಪ್ರದಾಯಿಕ ಹಾಗೂ ಅಪಾಯಕಾರಿ ಇಂಧನವನ್ನು ಅಡುಗೆಗೆ ಬಳಸಬೇಕಾದ ಮಹಿಳಾ ಫಲಾನುಭವಿಗಳೆಂದು ಗುರುತಿಸಲಾಗಿದ್ದು, ಈ ಎಲ್ಲ ಸಂಪರ್ಕಗಳನ್ನು ನೋಂದಣಿ ಮಾಡಿಸಿ, ಮಹಿಳೆಯರಿಗೆ ನೀಡಲಾಗುವುದು.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಅಥವಾ ರಿಯಾಯಿತಿಯ ಎಲ್‌ಪಿಜಿ ಸಿಲಿಂಡರ್ ಪಡೆಯಲು ಅಗತ್ಯವಿರುವ ದಾಖಲೆಗಳು ಹೀಗಿವೆ.
ಎಲ್‌ಪಿಜಿ ಸಿಲಿಂಡರ್ ಅನ್ನು ಉಚಿತವಾಗಿ ಅಥವಾ ರಿಯಾಯಿತಿಯಲ್ಲಿ ನೋಂದಾಯಿಸುವ ಮತ್ತು ಪಡೆದುಕೊಳ್ಳುವ ಉದ್ದೇಶಕ್ಕಾಗಿ ಎಲ್‌ಪಿಜಿ ವಿತರಕರಿಗೆ ತೆಗೆದುಕೊಳ್ಳಬಹುದಾದ ದಾಖಲೆಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:
– ಬಿಪಿಎಲ್ ಪ್ರಮಾಣಪತ್ರ (ಬಡತನ ರೇಖೆಗಿಂತ ಕೆಳಗಿರುವ ಪ್ರಮಾಣಪತ್ರ) ಇದು ಪುರಸಭೆ ಅಧ್ಯಕ್ಷರು ಅಥವಾ ಪಂಚಾಯಿತಿ ಪ್ರಧಾನರಿಂದ ಅಧಿಕೃತಗೊಳಿಸಬಹುದು.
– ಬಿಪಿಎಲ್ ಪಡಿತರ ಚೀಟಿ (ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ).
* ಫೋಟೋ ಐಡಿ ಕಾರ್ಡ್ ಈ ಪೈಕಿ ಯಾವುದಾದರೂ ಆಗಿರಬಹುದು:
– ಆಧಾರ್ ಕಾರ್ಡ್
– ಮತದಾರರ ಗುರುತಿನ ಚೀಟಿ
– ಚಾಲನಾ ಪರವಾನಗಿ
– ಪಾಸ್ಪೋರ್ಟ್
* ವಿಳಾಸ ದಾಖಲೆಯ ಪುರಾವೆ ಈ ಪೈಕಿ ಒಂದಿರಬಹುದು:
– ಆಧಾರ್ ಕಾರ್ಡ್
– ಮತದಾರರ ಗುರುತಿನ ಚೀಟಿ
– ಚಾಲನಾ ಪರವಾನಗಿ
– ಪಾಸ್ಪೋರ್ಟ್
– ಮನೆ ನೋಂದಣಿ ದಾಖಲೆಗಳು
– ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಭರ್ತಿ ಮಾಡಬೇಕಾದ ಅರ್ಜಿ ಇದ್ದು ಮತ್ತು ಈ ಅರ್ಜಿ ಎಲ್‌ಪಿಜಿ ವಿತರಣಾ ಕೇಂದ್ರದಲ್ಲಿ ಲಭ್ಯವಿದೆ.
ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕವನ್ನು ಹೇಗೆ ಪಡೆಯುವುದು?
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಿಪಿಎಲ್ ಕುಟುಂಬಗಳ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಮತ್ತು ಕೇಂದ್ರ ನೋಂದಣಿಗೆ ಲಭ್ಯವಾಗುವಂತೆ ಮಾಡಿದೆ. ಈ ಯೋಜನೆಯೊಂದಿಗೆ ಪಾರದರ್ಶಕತೆ ಹಾಗೂ ಘಟನೆಯನ್ನು ಕಾಪಾಡಿಕೊಳ್ಳಲು ಹೀಗೆ ಮಾಡಲಾಗಿದೆ.
ಸದ್ಯಕ್ಕೆ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವವರು) ಎಂದು ನೋಂದಾಯಿಸಿರುವ ವ್ಯಕ್ತಿಯು ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರಲಿ, ತಮ್ಮ ಬಿಪಿಎಲ್ ಕಾರ್ಡ್ ಅನ್ನು ಹತ್ತಿರದ ಎಲ್‌ಪಿಜಿ ವಿತರಕರ ಬಳಿಗೆ ತೆಗೆದುಕೊಂಡು ಹೋಗಬಹುದು ಮತ್ತು ಸಂದರ್ಭಾನುಸಾರ ಉಚಿತ ಅಥವಾ ಸಬ್ಸಿಡೈಸ್ಡ್ ಎಲ್‌ಪಿಜಿ ಸಿಲಿಂಡರ್‌ಗಾಗಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು.
ರೂ. 1,600ರ ಸರ್ಕಾರಿ ರಿಯಾಯಿತಿಯು ಒಳಗೊಂಡಿದ್ದು, 14.2 ಕೇಜಿ ಸಿಲಿಂಡರ್‌ಗೆ ರೂ. 1,450 ಮತ್ತು ಭದ್ರತಾ ಠೇವಣಿ, ಪ್ರೆಷರ್ ರೆಗ್ಯುಲೇಟರ್ಗೆ ರೂ. 150 ಇದೆ. ಹೆಚ್ಚುವರಿಯಾಗಿ, ಈ ಯೋಜನೆಯು ಬಿಪಿಎಲ್ ಕುಟುಂಬಗಳಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಗ್ಯಾಸ್ ಸ್ಟೌ ಮತ್ತು ಐಎಸ್ಐ ಗುಣಮಟ್ಟದ ಪೈಪ್ ಅನ್ನು ಸಹ ನೀಡುತ್ತದೆ.
ಅದೇ ಬಿಪಿಎಲ್ ಜನಸಂಖ್ಯೆಗೆ 5 ಕೇಜಿ ಸಿಲಿಂಡರ್ ಸಹ ಲಭ್ಯವಿದೆ ಮತ್ತು ಇದನ್ನು ರೂ.161ರ ವೆಚ್ಚದಲ್ಲಿ ವರ್ಷಕ್ಕೆ ಒಟ್ಟು 34 ಬಾರಿ ಬಳಸಬಹುದು ಮತ್ತು ರಿನೀವಲ್ ಮಾಡಬಹುದು.