AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: ಕೆವೈಸಿ ನಿಯಮಾವಳಿ ಅನುಸರಿಸದ ಓಲಾ ಫೈನಾನ್ಷಿಯಲ್ ಸರ್ವೀಸಸ್​ಗೆ 1.7 ಕೋಟಿ ರೂ. ದಂಡ ಹಾಕಿದ ಆರ್​ಬಿಐ

ಕೆವೈಸಿ ನಿಯಮಾವಳಿ ಅನುಸರಿಸುತ್ತಿಲ್ಲ ಎಂಬ ಕಾರಣಕ್ಕೆ ಓಲಾ ಫೈನಾನ್ಷಿಯಲ್ ಸರ್ವೀಸಸ್​ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ದಂಡ ವಿಧಿಸಿದೆ.

RBI: ಕೆವೈಸಿ ನಿಯಮಾವಳಿ ಅನುಸರಿಸದ ಓಲಾ ಫೈನಾನ್ಷಿಯಲ್ ಸರ್ವೀಸಸ್​ಗೆ 1.7 ಕೋಟಿ ರೂ. ದಂಡ ಹಾಕಿದ ಆರ್​ಬಿಐ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 13, 2022 | 1:20 PM

Share

ಭಾರತೀಯ ರಿಸರ್ವ್ ಬ್ಯಾಂಕ್​ನಿಂದ (RBI) ಓಲಾ ಫೈನಾನ್ಷಿಯಲ್ ಸರ್ವೀಸಸ್​ ಮೇಲೆ 1.7 ಕೋಟಿ ರೂಪಾಯಿ ದಂಡ ಹಾಕಲಾಗಿದೆ. ಆರ್​ಬಿಐನ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ಮಾರ್ಗದರ್ಶಿ ಸೂಚಿಗಳಿಗೆ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರೀಪೇಯ್ಡ್​ ಇನ್​ಸ್ಟ್ರುಮೆಂಟ್ಸ್​ ವಿತರಿಸುವುದಕ್ಕೆ ಓಲಾ ಫೈನಾನ್ಷಿಯಲ್ ಸರ್ವೀಸಸ್​ಗೆ ಪರವಾನಗಿ ಇದೆ. ಸಂಚಾರಕ್ಕಾಗಿ ಓಲಾ ಆ್ಯಪ್​ ಬಳಸುವಂಥ ಅದರ ಪ್ರಯಾಣಿಕರಿಗಾಗಿ ಪ್ರೀಪೇಯ್ಡ್ ವ್ಯಾಲೆಟ್ ಮಾಡಿದೆ. ಆರ್​ಬಿಐ ನಿಯಮಾವಳಿಯಂತೆ ಪ್ರೀಪೇಯ್ಡ್ ವ್ಯಾಲೆಟ್​ನಲ್ಲಿ ಕನಿಷ್ಠ ಮಾಹಿತಿಯೊಂದಿಗೆ 10 ಸಾವಿರ ರೂಪಾಯಿ ತನಕ ಮೊತ್ತ ಹಾಕುವುದಕ್ಕೆ ಅವಕಾಶ ನೀಡಲಾಗಿದೆ.

ತಿಂಗಳಿಗೆ 10 ಸಾವಿರ ರೂಪಾಯಿ ತನಕ ಮೊತ್ತ ಅದಕ್ಕೆ ಹಾಕಲು ಓಲಾ ಕನಿಷ್ಠ ಮಾಹಿತಿಯನ್ನು ಪಡೆಯಬೇಕು. ಅದರಲ್ಲಿ ದೃಢೀಕೃತ ಮೊಬೈಲ್ ಫೋನ್ ಸಂಖ್ಯೆ ಮತ್ತು ಸ್ವಘೋಷಿತವಾದ ಹೆಸರು ಮತ್ತು ಮಾನ್ಯತೆ ಪಡೆದ ದಾಖಲೆಯ ಯೂನಿಕ್ ಐಡೆಂಟಿಫಿಕೇಷನ್ ನಂಬರ್ ಇವುಗಳನ್ನು ಪಡೆಯಬೇಕು.

ಅಂಥ ಖಾತೆಗಳಲ್ಲಿ ಒಂದು ಹಣಕಾಸು ವರ್ಷದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ತುಂಬುವಂತಿಲ್ಲ. ಪೂರ್ಣ ಪ್ರಮಾಣದ ಕೆವೈಸಿ ಖಾತೆಗೆ ಗ್ರಾಹಕರು ವಿಳಾಸ ಮತ್ತು ಗುರುತಿನ ಪುರಾವೆಗಳನ್ನು ಒದಗಿಸಬೇಕು. ಬ್ಯಾಂಕ್​ ಖಾತೆ ಸೇರಿದಂತೆ ವಿವಿಧ ಹಣಕಾಸು ಸೇವೆಗಳಿಗೆ ಇದು ಅಗತ್ಯ. ಜಿಪ್​ಕ್ಯಾಶ್ (ZipCash) ಕಾರ್ಡ್​ ಸೇವೆಗಳನ್ನು ಸ್ವಾಧೀನ ಮಾಡಿಕೊಂಡಿರುವ ಓಕಾ ಹಣಕಾಸು ಸೇವೆಗಳ ವ್ಯವಹಾರದಲ್ಲಿದೆ. ಕಂಪೆನಿಯನ್ನು ಎಎನ್​ಐ ಟೆಕ್ನಾಲಜೀಸ್ ವಶಪಡಿಸಿಕೊಂಡಿತು. ಅದರ ಮಾಲೀಕ ಓಲಾ.

Published On - 1:20 pm, Wed, 13 July 22