AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಒಂದೇ ದಿನದಲ್ಲಿ ಬರೋಬ್ಬರಿ 6,100 ರೂ. ಕುಸಿತ ಕಂಡ ಬೆಳ್ಳಿ ಬೆಲೆ; ಚಿನ್ನದ ಬೆಲೆಯೂ ಇಳಿಕೆ

Silver Price Today: ಬೆಳ್ಳಿ ಬೆಲೆ ಇಂದು ಭಾರೀ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 62,500 ರೂ. ಇದ್ದುದು ಇಂದು ಒಂದೇ ದಿನದಲ್ಲಿ 6,100 ರೂ. ಕುಸಿತವಾಗುವ ಮೂಲಕ 56,400 ರೂ. ಆಗಿದೆ.

Gold Price Today: ಒಂದೇ ದಿನದಲ್ಲಿ ಬರೋಬ್ಬರಿ 6,100 ರೂ. ಕುಸಿತ ಕಂಡ ಬೆಳ್ಳಿ ಬೆಲೆ; ಚಿನ್ನದ ಬೆಲೆಯೂ ಇಳಿಕೆ
ಚಿನ್ನದ ಬೆಲೆ
TV9 Web
| Edited By: |

Updated on: Jul 14, 2022 | 5:48 AM

Share

ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಚಿನ್ನದ ಬೆಲೆ (Gold Rate) ಕೊಂಚ ಕುಸಿತವಾಗುತ್ತಿದೆ. ಇಂದು 10 ಗ್ರಾಂ ಚಿನ್ನದ ದರ 104 ರೂ. ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ (Silver Price) ನಿನ್ನೆ ಒಂದೇ ದಿನದಲ್ಲಿ 5,300 ಏರಿಕೆಯಾಗಿತ್ತು. ಆದರೆ, ಇಂದು ಬೆಳ್ಳಿ ದರ ಇಂದು 1 ಕೆಜಿಗೆ ಬರೋಬ್ಬರಿ 6,100 ರೂ. ಕುಸಿತವಾಗುವ ಮೂಲಕ ದಾಖಲೆಯ ಇಳಿಕೆ ಕಂಡಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಇಳಿಮುಖವಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,800 ರೂ. ಇದ್ದುದು 46,700 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,054 ರೂ. ಇದ್ದುದು 50,950 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,600 ರೂ. ಮುಂಬೈ- 46,700 ರೂ, ದೆಹಲಿ- 46,700 ರೂ, ಕೊಲ್ಕತ್ತಾ- 46,700 ರೂ, ಬೆಂಗಳೂರು- 46,740 ರೂ, ಹೈದರಾಬಾದ್- 46,700 ರೂ, ಕೇರಳ- 46,700 ರೂ, ಪುಣೆ- 46,770 ರೂ, ಮಂಗಳೂರು- 46,740 ರೂ, ಮೈಸೂರು- 46,740 ರೂ. ಇದೆ.

ಇದನ್ನೂ ಓದಿ: Gold Price Today: 3 ದಿನಗಳಿಂದ ಒಂದೇ ರೀತಿ ಇದೆ ಚಿನ್ನದ ಬೆಲೆ; ಬೆಳ್ಳಿ ಖರೀದಿಗೂ ಇದು ಒಳ್ಳೆ ಸಮಯ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 50,840 ರೂ, ಮುಂಬೈ- 50,950 ರೂ, ದೆಹಲಿ- 50,950 ರೂ, ಕೊಲ್ಕತ್ತಾ- 50,950 ರೂ, ಬೆಂಗಳೂರು- 51,000 ರೂ, ಹೈದರಾಬಾದ್- 50,950 ರೂ, ಕೇರಳ- 50,950 ರೂ, ಪುಣೆ- 51,040 ರೂ, ಮಂಗಳೂರು- 51,000 ರೂ, ಮೈಸೂರು- 51,000 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆ ಇಂದು ಭಾರೀ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 62,500 ರೂ. ಇದ್ದುದು ಇಂದು ಒಂದೇ ದಿನದಲ್ಲಿ 6,100 ರೂ. ಕುಸಿತವಾಗುವ ಮೂಲಕ 56,400 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,700 ರೂ, ಮೈಸೂರು- 61,700 ರೂ., ಮಂಗಳೂರು- 61,700 ರೂ., ಮುಂಬೈ- 56,400 ರೂ, ಚೆನ್ನೈ- 61,700 ರೂ, ದೆಹಲಿ- 56,400 ರೂ, ಹೈದರಾಬಾದ್- 61,700 ರೂ, ಕೊಲ್ಕತ್ತಾ- 56,400 ರೂ. ಆಗಿದೆ.

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್