ಮಾಸ್ಕ್ ಧರಿಸಿದ ಮುಖ್ಯಮಂತ್ರಿಗಳೊಂದಿಗೆ ಅದನ್ನು ಧರಿಸದೆ ಓಡಾಡಿದರು ಅವರ ಸಂಪುಟ ಸಹೋದ್ಯೋಗಿಗಳು!

ಮಾಸ್ಕ್ ಧರಿಸಿದ ಮುಖ್ಯಮಂತ್ರಿಗಳೊಂದಿಗೆ ಅದನ್ನು ಧರಿಸದೆ ಓಡಾಡಿದರು ಅವರ ಸಂಪುಟ ಸಹೋದ್ಯೋಗಿಗಳು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 03, 2022 | 10:32 PM

ಸೋಜಿಗದ ಸಂಗತಿಯೆಂದರೆ ವೈದ್ಯಕೀಯ ವ್ಯಾಸಂಗ ಮಾಡಿರುವ ಡಾ ಆಶ್ವತ್ಥ ನಾರಾಯಣ ಅವರಿಗೆ ಮಾಸ್ಕ್ ಧರಿಸುವ ಅವಶ್ಯತಕೆಯಿದೆ ಅಂತ ಗೊತ್ತಾಗದಿರೋದು! ಮುಖ್ಯಮಂತ್ರಿಗಳು, ಆರೋಗ್ಯ ಸಚಿವ ಸುಧಾಕರ್, ಭೈರತಿ ಬಸವರಾಜ ಮಾಸ್ಕ್ ಧರಿಸಿದ್ದರು. ಡಾ ಅಶ್ವತ್ಥ ನಾರಾಯಣ ಜೊತೆ ಯೋಗೇಶ್ವರ್ ಅವರಿಗೂ ಮಾಸ್ಕ್ ಬೇಡವಾಗಿತ್ತು!

ಬೆಂಗಳೂರು ನಗರವನ್ನು ಕಟ್ಟಿದ ಮಹಾನುಭಾವ ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರದಲ್ಲಿ ಸೋಮವಾರ ಹಬ್ಬದ ಸಂಭ್ರಮ. ಯಾಕಾಗಬಾರದು? ನಾಡಿನ ಮುಖ್ಯಮಂತ್ರಿ ಬರುತ್ತಿದ್ದಾರೆ ಅಂದರೆ ಸಂಭ್ರಮ ಸಡಗರ ಸಹಜವೇ. ಕೆಂಪಾಪುರರಕ್ಕೆ ತಮ್ಮ ಸಂಪುಟದ ಹಲವಾರು ಸದಸ್ಯರೊಂದಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಂಪೇಗೌಡರ ಸಮಾಧಿಗೆ ಪೂಜೆ ಸಲ್ಲಿಸಿದರು. ವಾದ್ಯಮೇಳದ ಸದ್ದಿನ ನಡುವೆ ಮುತ್ತೈದೆಯರಿಂದ ಆರತಿ ಬೆಳಗಿಸುವ ಮೂಲಕ ಬೊಮ್ಮಾಯಿ ಅವರನ್ನು ಕೆಂಪಾಪುರಕ್ಕೆ ಬರಮಾಡಿಕೊಳ್ಳಲಾಯಿತು. ಅವರೊಂದಿಗೆ ಸಚಿವರಾದ ಡಾ ಅಶ್ವತ್ಥ ನಾರಾಯಣ, ಭೈರತಿ ಬಸವರಾಜ, ಡಾ ಕೆ ಸುಧಾಕರ್ ಮತ್ತು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಮತ್ತು ಇನ್ನೂ ಕೆಲ ಗಣ್ಯರಿದ್ದರು.

ಸೋಜಿಗದ ಸಂಗತಿಯೆಂದರೆ ವೈದ್ಯಕೀಯ ವ್ಯಾಸಂಗ ಮಾಡಿರುವ ಡಾ ಆಶ್ವತ್ಥ ನಾರಾಯಣ ಅವರಿಗೆ ಮಾಸ್ಕ್ ಧರಿಸುವ ಅವಶ್ಯತಕೆಯಿದೆ ಅಂತ ಗೊತ್ತಾಗದಿರೋದು! ಮುಖ್ಯಮಂತ್ರಿಗಳು, ಆರೋಗ್ಯ ಸಚಿವ ಸುಧಾಕರ್, ಭೈರತಿ ಬಸವರಾಜ ಮಾಸ್ಕ್ ಧರಿಸಿದ್ದರು. ಡಾ ಅಶ್ವತ್ಥ ನಾರಾಯಣ ಜೊತೆ ಯೋಗೇಶ್ವರ್ ಅವರಿಗೂ ಮಾಸ್ಕ್ ಬೇಡವಾಗಿತ್ತು!
ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅಂತ ಮಾರ್ಗಸೂಚಿಮ ನಿಯಮಗಳನ್ನು ರೂಪಿಸುವವರೇ ಹೀಗೆ ಬೇಕಾಬಿಟ್ಟಿಯಾಗಿ ಮಾಸ್ಕ್ ಇಲ್ಲದೆ ಓಡಾಡಿದರೆ ಜನಸಾಮಾನ್ಯರಿಗೆ ಎಂಥ ಸಂದೇಶ ರವಾನೆಯಾದೀತು ಎಂಬ ಯೋಚನೆಯೂ ಅವರಲ್ಲಿ ಇಲ್ಲದಿರುವುದು ದುರಂತವೇ. ಕನಿಷ್ಟ ಪಕ್ಷ ಅವರು ತಮ್ಮ ನಾಯಕನನ್ನು ಅನಿಸರಿಸುವ ಪ್ರಯತ್ನವನ್ನಾದರೂ ಮಾಡಿದ್ದರೆ ಇದನ್ನೆಲ್ಲ ಹೇಳುವ ಪ್ರಸಂಗ ಉದ್ಭವಿಸುತ್ತಿರಲಿಲ್ಲ.

ರಸ್ತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುವ ಜನಸಾಮಾನ್ಯರಿಗೆ ಬಿಬಿಎಮ್​ಪಿ ಮಾರ್ಷಲ್​ಗಳು ದಂಡ ವಿಧಿಸುತ್ತಾರೆ. ಗಣ್ಯರಿಗೆ ಆ ನಿಯಮ ಅನ್ವಯ ಅಗೋದಿಲ್ಲವೇ?

ಇದನ್ನೂ ಓದಿ:   Viral Video: ಕೊವಿಡ್ ಉಲ್ಬಣದ ಆತಂಕದ ನಡುವೆಯೇ ಗೋವಾ ಬೀಚ್‌ನಲ್ಲಿ ಮುಗಿಬಿದ್ದ ಜನರು; ವಿಡಿಯೋ ವೈರಲ್

Published on: Jan 03, 2022 10:32 PM