CM ಆಗಿ ಎಲ್ಲಾ 33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ ಎಂದ ಡಿಕೆಶಿ

Edited By:

Updated on: Jun 25, 2026 | 4:10 PM

ಮುಖ್ಯಾಂಶಗಳು

  • CM ಆಗಿ ಎಲ್ಲಾ 33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ
  • ನಾನು ಮುಖ್ಯಮಂತ್ರಿಯಾದರೂ ನಾನು ನಿಮ್ಮ ಸೇವಕ, ನಿಮ್ಮ ಬಂಧು
  • ಮುನಿರಾಬಾದ್​ನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ

ಮುನಿರಾಬಾದ್​ನಲ್ಲಿರುವ ತುಂಗಾಭದ್ರಾ ಜಲಾಶಯದ 33 ಗೇಟ್​​​ಗಳನ್ನು ಬದಲಾಯಿಸಿ ಹೊಸ ಗೇಟ್​​ಗಳನ್ ಅಳವಡಿಸಲಾಗಿದ್ದು, ಇಂದು ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಸೇರಿಕೊಂಡು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಾವು ಇವತ್ತು ತುಂಗಭದ್ರಾ ಜಲಾಶಯ ಕಾಪಾಡಿದ್ದೇವೆ.ಹೀಗಾಗಿ ಇವತ್ತು ನಮಗೆ ಹೆಮ್ಮೆಯ ದಿನ, ನಾನು ಅತ್ಯಂತ ಖುಷಿಯಾಗಿದ್ದೇನೆ.

ಕೊಪ್ಪಳ, (ಜೂನ್ 25): ಮುನಿರಾಬಾದ್​ನಲ್ಲಿರುವ ತುಂಗಾಭದ್ರಾ ಜಲಾಶಯದ 33 ಗೇಟ್​​​ಗಳನ್ನು ಬದಲಾಯಿಸಿ ಹೊಸ ಗೇಟ್​​ಗಳನ್ ಅಳವಡಿಸಲಾಗಿದ್ದು, ಇಂದು ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಸೇರಿಕೊಂಡು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಾವು ಇವತ್ತು ತುಂಗಭದ್ರಾ ಜಲಾಶಯ ಕಾಪಾಡಿದ್ದೇವೆ.ಹೀಗಾಗಿ ಇವತ್ತು ನಮಗೆ ಹೆಮ್ಮೆಯ ದಿನ, ನಾನು ಅತ್ಯಂತ ಖುಷಿಯಾಗಿದ್ದೇನೆ. 19ನೇ ಗೇಟ್​ ಕೊಚ್ಚಿಕೊಂಡು ಹೋದಾಗ ನನಗೆ ಕರೆ ಮಾಡಿದ್ದರು. ಅಂದು ಬೆಳಗ್ಗೆ 8.30ಕ್ಕೆ ಡ್ಯಾಂ ಬಳಿ ಬಂದು ಪರಿಶೀಲನೆ ಮಾಡಿದ್ದೆ. ದಿಟ್ಟ ಪ್ರಯತ್ನದಿಂದ ಡ್ಯಾಂನ 19ನೇ ಗೇಟ್ ಬದಲಾವಣೆ ಮಾಡಿ ರೈತರ ಬೆಳೆಯನ್ನು ಉಳಿಸಿದ್ವಿ. ಈಗ 33 ಗೇಟ್ ಬದಲಾಯಿಸಲು ಭಗವಂತ ಆಶೀರ್ವಾದ ಮಾಡಿದ್ದಾನೆ. ನಾನು ನೀರಾವರಿ ಸಚಿವನಾಗಿದ್ದೆ, ಇವತ್ತು ಮುಖ್ಯಮಂತ್ರಿ ಆಗಿದ್ದೇನೆ. ಡ್ಯಾಂನ ಹೇಗೆ ರಕ್ಷಣೆ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. 3 ರಾಜ್ಯಗಳ ನೀರಾವರಿ ಸಮಸ್ಯೆಯನ್ನು ಒಮ್ಮತದಿಂದ ಬಗೆಹರಿಸೋಣ. ನಾವೆಲ್ಲ ಒಟ್ಟಾಗಿ ಹೋಗಬೇಕು ಅದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದರು.

Published on: Jun 25, 2026 04:10 PM
Loading...
Unable to load recommendations.
Follow Us
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More