ಅದು ನನಗೆ ಗೊತ್ತಿದೆ: ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಅಧಿವೇಶನ ಮುಗಿಯುತ್ತಿದ್ದಂತೆಯೇ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದು, 2024ರ ಫೆಬ್ರವರಿ, ಮಾರ್ಚ್ ತಿಂಗಳ ಹಣ ಹಾಕಿಲ್ಲ. ಅದು ನಿಜ ನನಗೆ ಗೊತ್ತಿದೆ. ಆದ್ರೆ ಮಾಹಿತಿ ಕೊರತೆಯಿಂದ ಕಣ್ತಪ್ಪಿನಿಂದ ಸಚಿವರು ಕೊಟ್ಬಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಅದನ್ನ ಸಚಿವರು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸೌಜನ್ಯಯುತವಾಗಿ ಒಪ್ಪಿಕೊಂಡೊದ್ದಾರೆ. ಅದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಕೊಪ್ಪಳ, (ಡಿಸೆಂಬರ್ 19): ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಮತ್ತು ವಿವಾದ ಮುಂದುವರಿದಿದೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಹಾಕಿಲ್ಲ. ಆದ್ರೆ, ಆಗಸ್ಟ್ ವರೆಗೂ ಹಾಕಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನದಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದು, ಇದನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷ ಬಿಜೆಪಿ, ಏಕೆ ಸದನಕ್ಕೆ ತಪ್ಪು ನೀಡಿದ್ರು? ಕೂಡಲೇ ಸಚಿವರು ಕ್ಷಮೆ ಕೇಳಿಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಎರಡು ತಿಂಗಳ 5 ಸಾವಿರ ಕೋಟಿ ರೂಪಾಯಿ ಹಣ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ. ಇದು ಕೋಲಾಹಲ ಸೃಷ್ಟಿಸಿಸುತ್ತಿದ್ದಂತೆಯೇ ಸಚಿವ ಹೆಬ್ಬಾಳ್ಕರ್, ಸದನದಲ್ಲಿ ತಮ್ಮಿಂದಾಗಿರುವ ತಪ್ಪನ್ನು ಒಪ್ಪಿಕೊಂಡರು. ಆರ್ಥಿಕ ಇಲಾಖೆಯಿಂದ ಎಡವಟ್ಟಾಗಿದೆ ಎಂದು ಸಿಎಂ ಬಳಿ ಇರುವ ಇಲಾಖೆ ಮೇಲೆ ಆರೋಪಿಸಿದ್ದರು. ಆಗ ಯಾವ ಆರ್ಥಿಕ ಇಲಾಖೆ ಅಧಿಕಾರಿಗಳು ಮಾತನಾಡಿಲ್ಲ.
ಆದ್ರೆ, ಇದೀಗ ಅಧಿವೇಶನ ಮುಗಿಯುತ್ತಿದ್ದಂತೆಯೇ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದು, 2024ರ ಫೆಬ್ರವರಿ, ಮಾರ್ಚ್ ತಿಂಗಳ ಹಣ ಹಾಕಿಲ್ಲ. ಅದು ನಿಜ ನನಗೆ ಗೊತ್ತಿದೆ. ಆದ್ರೆ ಮಾಹಿತಿ ಕೊರತೆಯಿಂದ ಕಣ್ತಪ್ಪಿನಿಂದ ಸಚಿವರು ಕೊಟ್ಬಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಅದನ್ನ ಸಚಿವರು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸೌಜನ್ಯಯುತವಾಗಿ ಒಪ್ಪಿಕೊಂಡೊದ್ದಾರೆ. ಅದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಈ ವೇಳೆ 2024ರ ಆರ್ಥಿಕ ವರ್ಷ ಮುಕ್ತಾಯ ಆಗಿದೆ ವಾಪಸ್ ಹಣ ಕೊಡೊಕೆ ಬರತ್ತಾ ಎಂಬ ಪತ್ರಕರ್ತರ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿ ಹೋದರು. ಹಾಗಾದ್ರೆ, ಎರಡು ತಿಂಗಳ ಗೃಹಲಕ್ಷ್ಮೀ ಹಣ ಮನ್ನಾ ಆಗುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.