ಹೈಕೋರ್ಟ್ ನಲ್ಲಿಂದು ಸಿದ್ದರಾಮಯ್ಯಗೆ ಹಿನ್ನಡೆಯಾದರೆ ಮುಂದಿನ ಕ್ರಮದ ಬಗ್ಗೆ ವಕೀಲರಲ್ಲಿ ಉತ್ತರವಿಲ್ಲ!
ಒಂದು ಪಕ್ಷ ಹೈಕೋರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದು ಸಿಎಂ ಸಿದ್ದರಾಮಯ್ಯನವರಿಗೆ ಹಿನ್ನಡೆಯಾದರೆ ಮುಂದಿನ ಕ್ರಮ ಏನು ಅಂತ ನಮ್ಮ ವರದಿಗಾರ ಕೇಳುವ ಪ್ರಶ್ನೆಗೆ ಪೊನ್ನಣ್ಣ ಅವರಲ್ಲಿ ಉತ್ತರವಿಲ್ಲ. ಕಾನೂನು ನಮ್ಮ ಪರವಿದೆ, ನ್ಯಾಯ ಸಿಗುವ ಭರವಸೆಯಿದೆ, ಹಿನ್ನಡೆಯಾದರೆ ತೆಗೆದುಕೊಳ್ಳಬಹುದಾದ ತೀರ್ಮಾನದ ಬಗ್ಗೆ ಈಗ ಹೇಳಲಾಗಲ್ಲ ಎಂದು ಅವರು ಹೇಳಿದರು.
ಬೆಂಗಳೂರು: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಸಿಎಂ ಪರವಾಗಿ ವಾದಮಂಡನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಹೇಳಿದರು. ಪ್ರತಿವಾದಿಗಳು ತಮ್ಮ ಉತ್ತರವನ್ನು ನೀಡಿದ ನಂತರ ಉಚ್ಚ ನ್ಯಾಯಾಲಯವು ಪೂರ್ಣ ವಾದಮಂಡನೆಗೆ ಅವಕಾಶ ಕಲ್ಪಿಸಲಿದೆ ಎಂದು ಪೊನ್ನಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ: ಪರ ಅಥವಾ ವಿರೋಧ ಆದೇಶ ಬಂದರೆ ಸಿದ್ದರಾಮಯ್ಯ ಮುಂದಿನ ಆಯ್ಕೆಗಳೇನು?
Published On - 1:43 pm, Thu, 29 August 24