ರಕ್ಷಣಾ ಸಚಿವ ರಾಜನಾಥ್ ಸಿಂಗ್​ರನ್ನು ಕಾಣಲು ಜೊತೆಯಾಗಿ ಹೊರಟ ಸಿದ್ದರಾಮಯ್ಯ ಮತ್ತು ಶಿವಕುಮಾರ್

Updated on: Jul 09, 2025 | 6:50 PM

ಅಸಲಿಗೆ ದೆಹಲಿ ಪ್ರವಾಸಕ್ಕೆ ಕೇವಲ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಾತ್ರ ಹೋಗಿಲ್ಲ, ಮಂತ್ರಿ ಮತ್ತು ಶಾಸಕರ ಪಟಾಲಂ ಕೂಡ ಅವರ ಜೊತೆಯಿದೆ. ಸಚಿವರಾದ ಕೆಜೆ ಜಾರ್ಜ್, ಭೈರತಿ ಸುರೇಶ್, ಮುಖ್ಯ ಸಚೇತಕ ಅಶೋಕ ಪಟ್ಟಣ್, ಶಾಸಕರಾದ ಎನ್​ಎ ಹ್ಯಾರಿಸ್, ಟಿಬಿ ಜಯಚಂದ್ರ, ಹಂಪನಗೌಡ ಬಾದರ್ಲಿ ಮೊದಲಾದವರು ದೆಹಲಿಯಲ್ಲಿದ್ದಾರೆ. ಇವರಲ್ಲಿ ಸ್ವಂತ ಖರ್ಚಿನಲ್ಲಿ ಹೋದವರು ಎಷ್ಟು ಜನವೋ?

ದೆಹಲಿ, ಜುಲೈ 9: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಏನು ನಡೆಯುತ್ತಿದೆಯೋ ಗೊತ್ತಾಗುತ್ತಿಲ್ಲ ಮಾರಾಯ್ರೇ. ಅಧಿಕಾರ ಹಂಚಿಕೆಯ ಬಗ್ಗೆ ಚರ್ಚಿಸಲು ಅವರಿಬ್ಬರನ್ನು ದೆಹಲಿಗೆ ಕರೆಸಲಾಗಿದೆ ಎಂದು ಹೇಳಲಾಗುತ್ತಿದೆ, ಅದರೆ ಅವರ ನಡುವೆ ಯಾವುದೇ ತೆರನಾದ ಮುನಿಸು, ಸೆಡವು, ಮನಸ್ತಾಪ ಇದ್ದಂತಿಲ್ಲ. ಇಬ್ಬರು ರಾಷ್ಟ್ರದ ರಾಜಧಾನಿಯಲ್ಲಿ ಒಟ್ಟಾಗಿ ಓಡಾಡುತ್ತಿದ್ದಾರೆ. ಇಲ್ನೋಡಿ, ರಕ್ಷಣಾ ಸಚಿವ ರಾಜನಾಥ ಸಿಂಗ್ (Defence Minister Rajnath Singh) ಅವರನ್ನು ಭೇಟಿಯಾಗಿ ದಸರಾ ಮಹೋತ್ಸವಕ್ಕೆ ಆಹ್ವಾನಿಸಲು ಮತ್ತು ಏರೋ ಶೋ ನಡೆಸಲು ಅನುಮತಿ ಕೋರಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಒಂದೇ ಕಾರಲ್ಲಿ ಹೋಗುತ್ತಿದ್ದಾರೆ.

ಇದನ್ನೂ ಓದಿ:   ಸಿದ್ದರಾಮಯ್ಯ ಸಿಎಂ ಸ್ಥಾನ ನಿಟ್ಟುಕೊಡಲ್ಲ, ಹಾಗಾಗಿ ಶಿವಕುಮಾರ್ ಸಿಎಂ ಆಗಲ್ಲ: ಬಿ ಶ್ರೀರಾಮುಲು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ