Budget session: ಕೇರ್ ಮಾಡುವುದು, ಹ್ಯಾಂಡ್ ಶೇಕ್ ಮಾಡುವುದು-ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಸದನದಲ್ಲಿ ಚರ್ಚೆಯ ವಿಷಯಗಳು!

|

Updated on: Jul 06, 2023 | 7:11 PM

ಸಿದ್ದರಾಮಯ್ಯ ಬಹಳ ವರ್ಷಗಳ ಹಿಂದೆ ಅಲ್ಲಿಂದ ಹೊರಬಿದ್ದು ಕಾಂಗ್ರೆಸ್ ಪಕ್ಷ ಸೇರಿ 2013ರಲ್ಲಿ ಮುಖ್ಯಮಂತ್ರಿಯಾದರು.

ಬೆಂಗಳೂರು: ಜೆಡಿಎಸ್ ಹಿಂದಿನ ನಾಯಕರು ಮತ್ತು ಹಾಲಿ ನಾಯಕರ ನಡುವಿನ ವಾಗ್ವಾದಗಳಿಗೆ ಇಂದಿನ ಬಜೆಟ್ ಅಧಿವೇಶನ ಸೀಮಿತವಾಗಿತ್ತು ಎಂದರೆ ಉತ್ಪ್ರೇಕ್ಷೆ ಅನಿಸದು. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಸಚಿವ ಚೆಲುವರಾಯಸ್ವಾಮಿ (Cheluvarayaswamy), ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಹೆಚ್ ಡಿ ರೇವಣ್ಣ (HD Revanna)-ಎಲ್ಲರೂ ಜೆಡಿಎಸ್ ಪಾಳೆಯದವರೇ. ಸಿದ್ದರಾಮಯ್ಯ ಬಹಳ ವರ್ಷಗಳ ಹಿಂದೆ ಅಲ್ಲಿಂದ ಹೊರಬಿದ್ದು ಕಾಂಗ್ರೆಸ್ ಪಕ್ಷ ಸೇರಿ 2013ರಲ್ಲಿ ಮುಖ್ಯಮಂತ್ರಿಯಾದರು. ಪ್ರಾಯಶಃ 2014ರಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಚೆಲುವರಾಯಸ್ವಾಮಿ ಈಗ ಕೃಷಿ ಸಚಿವರಾಗಿದ್ದಾರೆ. ಈ ವಿಡಿಯೋದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಕಾದಾಟ ನಡೆದಿದೆ. ನಿಮ್ಮನ್ನು ಕೇರ್ ಮಾಡಲ್ಲ ಅಂತ ಕುಮಾರಸ್ವಾಮಿ ಹೇಳಿದರೆ, ನೀವು ಕೇರ್ ಮಾಡದಿದ್ದರೆ ನಾವು ಹೆದರ್ಕೋತಿವಾ? ಯಾರು ನಿಮ್ಮನ್ನು ಕೇರ್ ಮಾಡಿ ಅಂತ ಹೇಳಿದ್ದು, ಹೋಗ್ರೀ ಆಚೆ ಅಂತ ಸಿದ್ದರಾಮಯ್ಯ ಸಿಡುಕುತ್ತಾರೆ. ಕೇರ್ ಮಾಡುವುದು, ಶೇಕ್ ಹ್ಯಾಂಡ್ ಮಾಡುವುದು-ಈ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಸದನದಲ್ಲಿ ಕಾದಾಡುತ್ತಾರೆ. ಧನ್ಯಳಾದಳು ತಾಯಿ ಭುವನೇಶ್ವರಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on